ಮಹಿಳಾ ದೌರ್ಜನ್ಯ ತಡೆ ಸಮಿತಿ ರಚಿಸಲಿ

5-SGN-2
Published on

ಶಿಗ್ಗಾಂವಿ: ಜಾನಪದ ವಿವಿಯಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ರಚನೆ ಜತೆಗೆ ಅದರ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಿ ಹೆಣ್ಣನ್ನು ಗೌರವಿಸಲಾಗುತ್ತದೆಯೊ ಆ ಸಂಸ್ಥೆ ಎತ್ತರದಲ್ಲಿ ಬೆಳೆಯುತ್ತದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಹೇಳಿದರು.

ಜನಪದ ಇಂದು ಕೇವಲ ಟೈಮ್‌ಪಾಸ್‌ಗೆ ಬಳಕೆಯಾಗುತ್ತಿದೆ. ಜನಪದ ಕಲೆಯ ಸಂಸ್ಕೃತಿಯನ್ನು ವಿಶ್ವವಿದ್ಯಾಲಯದ ಮುಖಾಂತರವೇ ಉಳಿಸುವ ಕೆಲಸವಾಗಬೇಕು. ಇಂದಿನ ಯುವ ಪೀಳಿಗೆ ಹೆಚ್ಚು ಸಾಮಾಜಿಕ ಜಾಲತಾಣ ಬಳಕೆಯಲ್ಲಿರುವುದರಿಂದ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಯುವ ಪೀಳಿಗೆಗೆ ಜನಪದ ಕಲೆಗಳನ್ನು ಪರಿಚಯಿಸಬೇಕೆಂದು ಜಾನಪದ ವಿ.ವಿ ಕುಲಪತಿಗಳಿಗೆ ಸಲಹೆ ನೀಡಿದರು.

ಜಾನಪದ ವಿವಿ ಕುಲಪತಿ ಟಿಎಂ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕುಲಸಚಿವ ಷಹಜಹಾನ್ ಮುದುಕವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಸಿಟಿ ಗುರುಪ್ರಸಾದ್ ಸ್ವಾಗತಿಸಿದರು, ಉಪನ್ಯಾಸಕಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಶರೀಫ್ ಮಾಕಪ್ಪನವರ್ ಸ್ವಾಗತಗೀತೆ ಹಾಡಿದರು.

ಸಂವಾದ: ಬಳಿಕ ಜರುಗಿದ ಸಂವಾದದಲ್ಲಿ ಮಾತನಾಡಿದ ಡಾ. ನಾಗಲಕ್ಷ್ಮಿ , ದೊಡ್ಡ ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡುವುದರ ಜತೆಗೆ ನಿಮಗೆ ನೀವೇ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ನಿಮ್ಮ ಮೇಲೆ ನಡೆಯವ ದೌರ್ಜನ್ಯಗಳನ್ನು ಮುಚ್ಚಿಟ್ಟಿಕೊಳ್ಳದೆ ತಂದೆ-ತಾಯಿ ಮುಂದೆ ಹೇಳಿಕೊಳ್ಳಿ ಪೊಲೀಸರ ಗಮನಕ್ಕೂ ತರಬೇಕು ಎಂದರು.

ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ತಾಪಂ ಇಒ ಮಂಜುನಾಥ ಸಾಳಂಕಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಇಂದುಧರ ಮುತ್ತಳ್ಳಿ, ಪ್ರೇಮಾ ಪಾಟೀಲ, ವಸಂತಾ ಬಾಗೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net