ಮಹಿಳಾ ಕಾಲೇಜಿಗೆ ನ್ಯಾಕ್ ‘ಬಿ’ ಮಾನ್ಯತೆ

Nyac
Published on

ಚಿತ್ರದುರ್ಗ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ನ್ಯಾಕ್‌ನಿಂದ ‘ಬಿ’ ಗ್ರೇಡ್ ಸಿಜಿಪಿಎ 2.31 ಮಾನ್ಯತೆ ದೊರೆತಿದ್ದು, ವಿಧಾನಸೌಧದ ಬ್ಯಾಂಕ್ವೆಟ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ ಅವರಿಗೆ ಮಂಗಳವಾರ ಅಭಿನಂದನಾ ಪತ್ರ ಪ್ರದಾನ ಮಾಡಿದರು.

2013-14ರಲ್ಲಿ ಆರಂಭವಾದ ಈ ಕಾಲೇಜು 10 ವರ್ಷ ಪೂರೈಸಿದೆ. ವಿದ್ಯಾರ್ಥಿಗಳ ಸಂಖ್ಯೆ 850 ಇದ್ದು, ಬಿ.ಎ, ಬಿ.ಕಾಂ ಪದವಿ ತರಗತಿಗಳು ನಡೆಯುತ್ತಿವೆ. ನ್ಯಾಕ್‌ಕೌನ್ಸಿಲ್ 2023ರ ಜೂ. 15, 16ರಂದು ಕಾಲೇಜಿನ ಗುಣಮಟ್ಟ ತಪಾಸಣೆ ನಡೆಸಲು ನ್ಯಾಕ್ ತಂಡ ಕಳುಹಿಸಿತ್ತು.

ರ‌್ಯಾಣದ ಕುಲಪತಿ ಡಾ.ರಾಜಕುಮಾರ್ ಮಿಟ್ಟಲ್ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರದ ಡಾ.ಶುಭಾ ತಿವಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾಲೇಜಿಗೆ ಆಗಮಿಸಿ ಪ್ರವೇಶ, ಫಲಿತಾಂಶ, ಕಟ್ಟಡ, ಮೂಲಸೌಕರ್ಯ, ವಿದ್ಯಾರ್ಥಿ ವೇತನ, ವಸತಿ, ಗ್ರಂಥಾಲಯ, ಕ್ರೀಡಾ ಸೌಲಭ್ಯ, ಕಚೇರಿ, ಲೆಕ್ಕಪತ್ರ ನಿರ್ವಹಣೆ, ಆಟದ ಮೈದಾನ, ಪ್ರಾಧ್ಯಾಪಕರ ಸಂಶೋಧನೆ, ಬೋಧನೆ ಎಲ್ಲವನ್ನು ಪರಿಶೀಲಿಸಿ ಕೌನ್ಸಿಲ್‌ಗೆ ವರದಿ ನೀಡಿತ್ತು.

ಸ್ವಂತ ಕಟ್ಟಡ ಇಲ್ಲದಿದ್ದರೂ ಗುಣಮಟ್ಟ ಶಿಕ್ಷಣ ಹಾಗೂ ಇತರೆ ಸೌಲಭ್ಯ ಗಮನಿಸಿದ ನ್ಯಾಕ್ ಕೌನ್ಸಿಲ್ ಕಾಲೇಜಿಗೆ ಮುಂದಿನ 5 ವರ್ಷದವರೆಗೆ ‘ಬಿ’ ಗ್ರೇಡ್ ಮಾನ್ಯತೆ ನೀಡಿದೆ. ಈ ಮೂಲಕ 10 ವರ್ಷದೊಳಗೆ ಈ ಪ್ರಕ್ರಿಯೆಗೆ ಒಳಪಟ್ಟ ರಾಜ್ಯದ ಮೊದಲ ಕಾಲೇಜಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಐಕ್ಯುಎಸಿ ಸಂಚಾಲಕ ಡಾ.ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net