ಮಹಿಳಾ ಆರ್ಥಿಕ ಸದೃಢತೆಗೆ ಪೂರಕ

3008 Surapur 01
ಸುರಪುರ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡ ಗೃಹಲಕ್ಷ್ಮಿಯೋಜನೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಮನೆ ಯಜಮಾನಿಗೆ ಸಾಂಕೇತಿಕ ಚಕ್ ವಿತರಿಸಿ ಚಾಲನೆ ನೀಡಿದರು. ತಹಸೀಲ್ದಾರ್ ಕೆ. ವಿಜಯಕುಮಾರ, ತಾಪಂ ಇಒ ಬಸವರಾಜ ಸಜ್ಜನ್, ಪೌರಾಯುಕ್ತ ಪ್ರೇಮ ಚಾರ್ಲ್ಸ್, ಸುವರ್ಣ ಎಲಿಗಾರ ಇತರರಿದ್ದರು.
Published on

ಸುರಪುರ: ಒಂದು ಕುಟುಂಬ ಸದೃಢವಾಗಬೇಕಾದರೆ ಮಹಿಳೆ ಆರ್ಥಿಕವಾಗಿ ಬಲಿಷ್ಠವಾದಾಗ ಮಾತ್ರ ಕುಟುಂಬದ ನಿರ್ವಹಣೆ ಅಚ್ಚುಕಟ್ಟಾಗಿ ಸಾಗುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ನಗರದ ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದರು.

ತಹಸೀಲ್ದಾರ್ ಕೆ. ವಿಜಯಕುಮಾರ, ತಾಪಂ ಇಒ ಬಸವರಾಜ ಸಜ್ಜನ್, ನಗರಸಭೆ ಆಯುಕ್ತ ಪ್ರೇಮ್‌ಚಾರ್ಲ್ಸ್, ಸಿಡಿಪಿಒ ಆನೀಲ ಕಾಂಬ್ಳೆ, ನಗರಸಭೆ ಸದಸ್ಯರಾದ ರಾಜಾ ಪಿಡ್ಡನಾಯಕ, ಜುಮ್ಮಣ್ಣ ಕೆಂಗೂರಿ, ಕಮ್ರುದ್ದೀನ್, ಮಹೆಬೂಬ್ ಸಾಬ್, ಸುವರ್ಣ ಎಲಿಗಾರ ಇತರರಿದ್ದರು.

ಸುರಪುರ ತಾಲೂಕಿನಲ್ಲಿ ಶೇ. ೮೪ ಮತ್ತು ಹುಣಸಗಿ ತಾಲೂಕಿನಲ್ಲಿ ೮೦ರಷ್ಟು ಗೃಹಲಕ್ಷ್ಮಿ ಯೋಜನೆಗೆ ನೋದಂಣಿ ಮಾಡುವ ಮೂಲಕ ಗುರಿ ಸಾಧಿಸಲಾಗಿದ್ದು, ಪ್ರತಿಶತ ಗುರಿ ಸಾಧಿಸಲು ಅಧಿಕಾರಿಗಳು ಶ್ರಮಿಸಬೇಕು.
| ರಾಜಾ ವೆಂಕಟಪ್ಪ ನಾಯಕ ಶಾಸಕ ಸುರುಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net