ಮಹಿಳಾ ಅಸ್ಮಿತೆ ಮುಕ್ತ ಸಂವಾದ ಮೇ 24ರಂದು

oppo_2
oppo_2
Published on

ಕಲಬುರಗಿ: ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಮಹಿಳಾ ದೌರ್ಜನ್ಯದ ಹೆಸರಿನಲ್ಲಿ ರಾಜಕಾರಣದ ಬಗ್ಗೆ ಚರ್ಚಿಸಲು ಸಮಾನ ಮನಸ್ಕ ವೇದಿಕೆಯಿಂದ `ಪ್ರಸಕ್ತ ರಾಜಕಾರಣ ಮತ್ತು ಮಹಿಳಾ ಅಸ್ಮಿತೆ' ಕುರಿತು ಶುಕ್ರವಾರ ಮುಕ್ತ ಸಂವಾದ ಹಮ್ಮಿಕೊಳ್ಳಳಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷ ಡಾ.ಮೀನಾಕ್ಷಿ ಬಾಳಿ ಹೇಳಿದರು. ನಗರದ ಕನ್ನಡ ಭವನದಲ್ಲಿ ಶುಕ್ರವಾರ ಬೆಳಗ್ಗೆ ೧೧ಕ್ಕೆ ಮುಕ್ತ ಸಂವಾದ ನಡೆಯಲಿದೆ. ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿದ್ಯಾರ್ಥಿಗಳು, ಮಹಿಳಾ ಹೋರಾಟಗಾರು ಸೇರಿ ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ, ಬೆಂಗಳೂರಿನ ರುಕ್ಸಾನಾ, ದೀಪಾ, ಪ್ರಬುದ್ಧ, ಕಲಬುರಗಿಯ ಆಳಂದ ತಾಲೂಕಿನ ಹಸುಳೆಗಳ ಜೀವ ಅತ್ಯಾಚಾರ, ಕೊಲೆಗೆ ಬಲಿಯಾಗಿವೆ. ಎಲ್ಲದಕ್ಕೂ ಹೆಣ್ಣನ್ನು ಗುರಿಯಾಗಿಸಿ ಕೊಲೆ, ಸುಲಿಗೆ, ಅಪಮಾನ, ಕಿರುಕುಳ ನಡೆಯುತ್ತಿವೆ. ಇದರ ಲಾಭವನ್ನು ರಾಜಕೀಯ ಪಕ್ಷಗಳು ಮಾಡಿಕೊಳ್ಳುತ್ತಿರುವುದು ದುರಂತ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹಾಸನದಲ್ಲಿ ಸಂಸದ ಕಾಮಯಜ್ಞ ನಡೆಸಿದ್ದಾನೆ. ರಾಜಕಾರಣಿಗಳು ಬಳಸುತ್ತಿರುವ ಕೀಳು ಭಾಷೆ, ಮಹಿಳೆಯರ ಬಗೆಗೆ ಹರಿಬಿಡುತ್ತಿರುವ ವಿಕೃತ ವಾದಗಳು, ಮಹಿಳೆಯದ ದೇಹವನ್ನು ರಾಜಕೀಯ ಅಸವಾಗಿಕೊಳ್ಳುತ್ತಿರುವ ಕುರಿತು ಜಾಗೃತಿ ಮೂಡಿಸಲು ಮುಕ್ತ ಸಂವಾದ ನಡೆಸಲಾಗುತ್ತಿದೆ ಎಂದು ಪದ್ಮಾ ಪಾಟೀಲ್ ಹೇಳಿದರು. ಪ್ರಮುಖರಾದ ಶಿವಲಿಂಗಮ್ಮ, ಪದ್ಮಿನಿ ಕಿರಣಗಿ, ಚಂದಮ್ಮ ಗೋಳಾ, ಲವಿತ್ರಾ ವಸದ, ಸುಜಾತಾ ಕುಸನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net