

ಸೇಡಂ: ಸುಗಮ ಸಂಗೀತ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿರುವ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿಯು 2023ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಘೋಷಿಸಿದ್ದು, ಇಲ್ಲಿನ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಪ್ರಶಸ್ತಿಗೆ ಭಾಜನರಾದವರಲ್ಲಿ ಒಬ್ಬರಾಗಿದ್ದಾರೆ.
ಕಲ್ಯಾಣ ಕರ್ನಾಟಕದ ಕಲಬುರಗಿಯ ಕವಿ, ಲೇಖಕರಾದ ಮಹಿಪಾಲರೆಡ್ಡಿ ಮುನ್ನೂರ ಅವರೊಟ್ಟಿಗೆ ಖ್ಯಾತ ಗಾಯಕಿ ಶಶಿಕಲಾ ಸುನೀಲ್, ಪ್ರತಿಷ್ಠಿತ ಸಂಸ್ಥೆ ವೀಣಾ ಮ್ಯೂಸಿಕಲ್‌ನ ಮಾಲೀಕರಾದ ಪಿ.ನಾಗರಾಜ್, ಕನ್ನಡ ಕಾರ್ಯಕರ್ತ, ಸಂಘಟಕ ಜಾವಗಲ್ ಪ್ರಸನ್ನಕುಮಾರ, ರಂಗಕರ್ಮಿ, ನಟ ಬೆಳ್ಳಿಚುಕ್ಕಿ ವೀರೇಂದ್ರ ಅವರುಗಳು ಸದರಿ ಪ್ರಸಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.10ರಂದು ಬೆಂಗಳೂರಿನಲ್ಲಿ ಪ್ರಸಸ್ತಿ ಪ್ರಧಾನ ಮಾಡಲಾಗುತ್ತಿದೆ.