ಮಹಾಶಿವರಾತ್ರಿಯಂದೇ ಮನೆಗೆ ನುಗ್ಗಿದ ಹಾವು!

Snake 11
ನಾಗರಹಾವು.
Published on

ಮೈಸೂರು: ಮಹಾಶಿವರಾತ್ರಿಯಂದೇ ನಗರದ ಯಾದವಗಿರಿಯ ಮನೆಯೊಂದರಲ್ಲಿ ನುಗ್ಗಿದ್ದ ನಾಗರಹಾವನ್ನು ಸ್ನೇಕ್ ಸೂರ್ಯ ಕೀರ್ತಿ ಅವರು ಸಂರಕ್ಷಿಸಿದ್ದಾರೆ.

ಮನೆ ಮಾಲೀಕರಾದ ಶಿವಪ್ರಕಾಶ್ ಎನ್ನುವವರು ಗಿಡಕ್ಕೆ ನೀರು ಹಾಕುವಾಗ ಹಾವು ಕಾಣಿಸಿಕೊಂಡಿದ್ದು ತಕ್ಷಣವೇ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಂ ಪುತ್ರ ಸೂರ್ಯ ಕೀರ್ತಿ ಅವರು ಹಾವನ್ನು ರಕ್ಷಿಸಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆ ದಿಢೀರ್ ಹಾವು ಕಾಣಿಸಿಕೊಂಡಿದೆ. ಹಬ್ಬದ ದಿನವೇ ಹಾವು ಬಂದಿರುವುದು ಖುಷಿ ತಂದಿದೆ. ಮುಂದೆ ಒಳ್ಳೆಯದಾಗಬಹುದು ಎಂದು ಮನೆ ಮಾಲೀಕ ಶಿವಪ್ರಕಾಶ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net