

ರಾಯಬಾಗ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ.ಪುಷ್ಪಾ ಅಕ್ಕನವರ ನೇತೃತ್ವದಲ್ಲಿ ಮೂರು ದಿನಗಳ ನಿರಾಕಾರ ಶಿವನ ಅವತರಣ 89ನೇ ಮಹಾಶಿವರಾತ್ರಿ ಕಾರ್ಯಕ್ರಮ ಜರುಗಲಿದೆ.
ಫೆ.25ರಂದು ಬೆಳಗ್ಗೆ 9 ಗಂಟೆಗೆ ವಿಶ್ವಶಾಂತಿಗಾಗಿ ಶಾಂತಿಯಾತ್ರೆ ಹಾಗೂ 12 ಕಾರುಗಳ ಮೇಲೆ ದ್ವಾದಶ ಜ್ಯೋತಿರ್ಲಿಂಗಗಳ ಮೆರವಣಿಗೆ ಜರುಗುವುದು. ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸಿರೊಟ್ಟಿ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಸುರೇಶ ಮುಂಜೆ, ಸಿಪಿಐ ಬಿ.ಎಸ್.ಮಂಟೂರ ಭಾಗವಹಿಸಲಿದ್ದಾರೆ.
ಫೆ.26 ರಂದು ಸಂಜೆ 5 ಗಂಟೆಗೆ ಮಹಾಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮ ಜರುಗಲಿದೆ. ಮಾಜಿ ಸಂಸದ ಅಮರಸಿಂಹ ಪಾಟೀಲ ಉದ್ಘಾಟಿಸಲಿದ್ದಾರೆ. ಮಹಾಲಿಂಗಪುರ ಸೇವಾ ಕೇಂದ್ರದ ರಾಜಯೋಗಿನಿ ಬಿ.ಕೆ.ಶಿವಲೀಲಾ ಅಕ್ಕನವರು ಸಾನ್ನಿಧ್ಯ ವಹಿಸಲಿದ್ದಾರೆ. ರಾಜಯೋಗಿನಿ ಬಿ.ಕೆ.ನೀತಾ ಅಕ್ಕನವರು ಶಿವಸಂದೇಶ ನೀಡಲಿದ್ದಾರೆ.
ಫೆ.27ರಂದು ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜಿಪಂ ಮಾಜಿ ಸದಸ್ಯ ಪ್ರಣಯ ಪಾಟೀಲ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಮಹಾಶಿವರಾತ್ರಿ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ.ಪುಷ್ಪಾ ಅಕ್ಕನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.