

ಅಥಣಿ: ಮಹಾವೀರರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ತಹಸೀಲ್ದಾರ್ ಸಿದರಾಯ ಭೋಸಗಿ ಹೇಳಿದರು.
ತಾಲೂಕಿನ ಮಿನಿ ವಿಧಾನಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಜೈನ ಸಮುದಾಯದಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ ಮಾತನಾಡಿ, ಮಹಾವೀರರು ಅಹಿಂಸಾ ಪರಮೊಧರ್ಮದ ಪ್ರತಿಪಾದಕರು. ಸಕಲ ಪ್ರಾಣಿ, ಪಕ್ಷಿಗಳಲ್ಲಿ ಜೀವವಿದೆ ಪಾಪ ನರಕವಾದರೆ ಪುಣ್ಯ ಸ್ವರ್ಗವಾಗುವುದು ಎನ್ನುವ ಸಂದೇಶ ಸಾರಿದ್ದಾರೆ. ತಹಸೀಲ್ದಾರ್ ಸಿದರಾಯ ಭೋಸಗಿ ಮತ್ತು ಪುರಸಭಾ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ನಂತರ ಪಟ್ಟಣದ ಜೈನ ಬಸದಿಯಲ್ಲಿ ಭಗವಾನ ಮಹಾವೀರರ ಪಲ್ಲಕ್ಕಿ ಉತ್ಸವ ಮತ್ತು ಶೋಭಾಯಾತ್ರೆ ಸಾಗಿ ಮಾರುಕಟ್ಟೆಯಲ್ಲಿರುವ ಜೈನ ಸಮುದಾಯದ ಸಭಾಭವನದಲ್ಲಿ ಸಮಾವೇಶಗೊಂಡಿತು.
ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಗಜಾನನ ಮಂಗಸೂಳಿ, ಚಿದಾನಂದ ಸವದಿ, ಧರೆಪ್ಪ ಠಕ್ಕಣವರ, ಚಂದ್ರಕಾಂತ ಘೋಂಗಡಿ, ಎಸ್.ಬಿ.ಲಠ್ಠೆ, ಅರುಣಕುಮಾರ ಯಲಗುದ್ರಿ, ಕಲ್ಲಪ್ಪ ವನಜೋಳ, ಅಮರ ದುರ್ಗಣ್ಣವರ, ರಾಜು ಕರ್ಪೂರಶೆಟ್ಟಿ, ಪ್ರಶಾಂತ ಇಜಾರೆ, ಸಂತೋಷ ಬೊಮ್ಮಣವರ, ಧನಪಾಲ ಮೆಕನಮರಡಿ, ಬಾಬುರಾವ ಲಡಗಿ ಇತರರಿದ್ದರು.