

ಕಲಬುರಗಿ: ಭಗವಾನ ಮಹಾವೀರ ತೀರ್ಥಂಕರ ಜನ್ಮಕಲ್ಯಾಣ ಮಹಾ ಮಹೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ನಗರದ ಮಾಯಾ ಮಂದಿರದಿAದ ಸೂಪರ್ ಮಾರ್ಕೆಟ್ ಮೂಲಕ ನಗರದ ಜೈನ ಮಂದಿರದವರೆಗೆ ತೀರ್ಥಂಕರರ ಭಾವಚಿತ್ರದ ಭವ್ಯ ಮೆರವಣಿಗೆ ಸಾಗಿತು. ಸಂಗೀತ ವಾದ್ಯ ವೈಭವದೊಂದಿಗೆ ತೀರ್ಥಂಕರರ ಜೈಘೋಷಣೆಗಳೊಂದಿಗೆ ನೂರಾರು ಜೈನ ಸಮಾಜದ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.
ಮೆರವಣಿಗೆ ನಂತರ ಮಂದಿರದಲ್ಲಿ ಅಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆಗಳು ನೆರವೇರಿದವು. ಶ್ರೀ ಮಹಿಂದ್ರಸಾಗರ ಸುರೇಶ್ವರಜೀ ಮಹಾರಸಾಬ್, ಶ್ರೀ ಮೇರು ಪದ್ಮಸಾಗರ, ಶ್ರೀ ಅರಹಂ ಪದ್ಮಸಾಗರ, ಶ್ರೀ ಓಂ ಪದ್ಮಸಾಗರ ಸಾನ್ನಿಧ್ಯ ವಹಿಸಿದ್ದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಸಂಸದ ಡಾ.ಉಮೇಶ ಜಾಧವ್, ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಪ್ರಮುಖರಾದ ಸುರೇಶ ತಂಗಾ, ಪ್ರಕಾಶ ಜೈನ್, ವಜ್ರಕುಮಾರ ಪಾಟೀಲ್, ಅಂಕುಶ ಶಹಾ, ನಾಗನಾಥ ಚಿಂದೆ, ರಾಜೇಂದ್ರ ಕುಣಚಗಿ, ಅನಿಲ ಭಸ್ಮೆ, ರಮೇಶ ಬೆಳಕೇರಿ, ಸುರೇಶ ಕಾಸಾರ, ಶ್ರೇಣಿಕ ಪಾಟೀಲ್, ಬ್ರಹ್ಮ ಜಗಶೆಟ್ಟೆ, ಬಿ.ಕೆ.ಪಾಟೀಲ್ ಇತರರಿದ್ದರು.