ಮಹಾವೀರ ಜಯಂತಿ ಆಚರಣೆ

Published on

ಯಳಂದೂರು: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಇದರ ನಿಮಿತ್ತ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಯದುಗಿರಿ ಮಾತನಾಡಿ, ಭಾರತೀಯ ಸಂಸ್ಕೃತಿಯು ವಿಭಿನ್ನತೆಯಲ್ಲೂ ಏಕತೆಯನ್ನು ಹೊಂದಿದೆ. ಮಹಾವೀರರು ಜೈನ ಧರ್ಮದ ಪ್ರತಿಪಾದಕರಾಗಿದ್ದರು. ತೀರ್ಥಂಕರರಾಗಿ ಇವರು, ಅಹಿಂಸೆ, ಶಾಂತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಧರ್ಮದ ಪ್ರವರ್ತಕರಾಗಿದ್ದರು. ಈ ಧರ್ಮದ ಅನುಯಾಯಿಗಳು ಇಂದಿಗೂ ಕೂಡ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ವಾಸವಾಗಿದ್ದಾರೆ. ಇಂತಹವರ ತತ್ವಾದರ್ಶಗಳು ಎಲ್ಲರೂ ಪಾಲಿಸುಂತಾಗಬೇಕು ಎಂದರು. ಪಪಂ ಸದಸ್ಯ ಮಹೇಶ್, ಕಂದಾಯ ಇಲಾಖೆಯ ಶ್ರೀನಿವಾಸ್ ಸೇರಿದಂತೆ ಅನೇಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net