ಮಹಾಲಕ್ಷ್ಮೀ ಶಕ್ತಿಪೀಠದಲ್ಲಿ ಜಾತ್ರೋತ್ಸವ

1802Klb09
Published on

ಕಲಬುರಗಿ: ಶ್ರೀನಿವಾಸ ಸರಡಗಿಯ ಶ್ರೀ ಮಹಾಲಕ್ಷಿö್ಮÃ ಶಕ್ತಿ ಪೀಠದ ಜಾತ್ರೆ ನಿಮಿತ್ತ ಸೋಮವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಭವ್ಯ ರಥೋತ್ಸವ, ಲಕ್ಷ ದೀಪೋತ್ಸವ ನೆರವೇರಿತು. ವಿವಿಧ ಕ್ಷೇತ್ರದ ಸಾಧಕರು, ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಸವಕಲ್ಯಾಣದ ಶ್ರೀ ಸರಡಗಿ ಅನ್ನಪೂರ್ಣೇಶ್ವರಿ ಸಂಸ್ಥಾನ, ಶ್ರೀ ಸರಡಗಿ ಶಕ್ತಿ ಇಂಗ್ಲಿಷ ಮಿಡಿಯಂ ಶಾಲೆ ವಿದ್ಯಾರ್ಥಿಗಳಿಂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಡಾ.ಶೋಭಾ ಆರ್.ಎಂ. ಮತ್ತು ಡಾ.ರಮೇಶ ಎಸ್.ಎಂ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಯುನೈಟೆಡ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಪೀಠಾಧಿಪತಿ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ, ಶ್ರೀ ಡಾ.ಪರಮಾನಂದ ಸ್ವಾಮೀಜಿ, ಶ್ರೀ ಶರಣಯ್ಯ ಸ್ವಾಮೀಜಿ, ಶ್ರೀ ಡಾ.ಅಮೃತಪ್ಪ ದೇವಿ ಮುತ್ಯಾ ಸೇರಿ ವಿವಿಧ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಮುಖರಾದ ಶಿವಕಾಂತ ಮಹಾಜನ, ಅರುಣಕುಮಾರ ಪಾಟೀಲ್, ನೀಲಕಂಠ ಮೂಲಗೆ, ಪ್ರದೀಪ ವಾತಡೆ, ಸುನಿಲ ಪಾಟೀಲ್, ವಿನೋದ ಪಾಟೀಲ್, ಆರ್.ಎಸ್.ಪಾಟೀಲ್, ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನ್ನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net