ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮಹಾಪ್ರಸಾದ ವಿತರಣೆ

PH 01
Published on

ಕಲಬುರಗಿ: ನಗರದ ಜೇವರ್ಗಿ ಕಾಲನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಹಾಗೂ ಮಹಾಪ್ರಸಾದ ವಿತರಣೆ ನಡೆಯಿತು.

ಬೆಳಗ್ಗೆ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ, ನೈವೇದ್ಯ ಸಮರ್ಪಣೆ ಜರುಗಿತು. ಬಳಿಕ ಬಡಾವಣೆಯ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಅಸಂಖ್ಯಾತ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.

ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಶ ನೀಲಹಳ್ಳಿ, ಉಪಾಧ್ಯಕ್ಷರಾದ ರಾಜು ಮಾನೆ, ಮಲ್ಲಿನಾಥ ಗೋಡವಿ, ಗೌರವ ಅಧ್ಯಕ್ಷ ಶಶಿಕಾಂತ ಗುತ್ತೇದಾರ್, ಪ್ರಧಾನ ಕಾರ್ಯದರ್ಶಿ ರಾಜದೀಪ ಗುತ್ತೇದಾರ್, ಖಜಾಂಚಿ ಶಾಂತು ಬಿರಾದಾರ, ಪ್ರಮುಖರಾದ ಸಂಗಮೇಶ ಬೆಳಮಗಿ, ನಂದರಾಜ, ಅವಿನಾಶ, ಪುನೀತ್, ಮಲ್ಲಿನಾಥ, ಗುಂಡೇರಾವ್, ವಿರೇಂದ್ರ, ಸುಧಾಕರ್, ಬಾಬು ಜಮಾದಾರ್, ಗುರುರಾಜ ರೋಡಗಿ, ಸಂಗಮೇಶ, ಧರ್ಮರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net