

ಸಿಂಧನೂರು: ನಗರದ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಕ್ಕಾಗಿ ಆಯೋಜಿಸಿದ್ದ ಮಹಾರುದ್ರ ಮಹಾಯಜ್ಞ ಮಹೋತ್ಸವ ಬುಧವಾರ ಪೂರ್ಣಾಹುತಿ ಹಾಗೂ ಧರ್ಮ ಸಭೆಯೊಂದಿಗೆ ಸಮಾರೋಪಗೊಂಡಿತು.
ಉಜ್ಜೈನ್, ಕಾಶಿ, ಹಿಮಾಲಯ, ರಾಜಸ್ತಾನದಿಂದ ಬಂದಿದ್ದ ಅನೇಕ ಸಾಧುಗಳ ನೇತೃತ್ವದಲ್ಲಿ ನಿತ್ಯ ದೇವರ ಆರಾಧನೆ, ಮಹಾರುದ್ರಾಭಿಷೇಕ, ಯಜ್ಞ, ಮಂಡಲ ಮತ್ತು ಮಂಟಪ ಪೂಜೆ, ಹೋಮ ಸೇರಿ ವಿವಿಧ ಧಾರ್ಮಿಕ ಪೂಜೆ ನೆರವೇರಿಸಲಾಯಿತು. ನಾಗಸಾಧುಗಳಿಂದ ಸಾವಿರಾರು ಅಭಿಮಂತ್ರಿತ ರುದ್ರಾಕ್ಷಿಗಳನ್ನು ಉಚಿತವಾಗಿ ವಿತರಿಸಲಾಯಿತು. ಬಂಗಾರಿಕ್ಯಾಂಪ್ ಸದಾನಂದ ಶರಣರು, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಮಾಜಿ ಶಾಸಕ ವೆಂಕಟರಾವ ನಾಡಗೌಡ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಉಪ್ಪಾರ ಸಮಾಜದ ಮುಖಂಡ ಕೆ.ಮರಿಯಪ್ಪ, ಗೋಸ್ವಾಮಿ ಸಮಾಜದ ಅಧ್ಯಕ್ಷ ಶಂಕರಗಿರಿ, ಮಹಾಯಜ್ಞ ಸಮಿತಿ ಸಂಚಾಲಕ ಸುರೇಶ ಹಚ್ಚೊಳ್ಳಿ ಇತರರಿದ್ದರು.