

ರಾಯಣ್ಣ ಆರ್.ಸಿ
ಬೆಂಗಳೂರು: ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುವಂತೆ ಭಾಸವಾಗುವ ಭೂತಾಯಿ, ಅರಬ್ಬಿ ಸಮುದ್ರದ ಕಡಲ ತೀರದಲ್ಲಿ ಆಹ್ಲಾದಕರವಾಗಿ ಬೀಸುವ ತಂಗಾಳಿ, ದಡವನ್ನು ಚುಂಬಿಸುವ ಸಮುದ್ರದ ಅಲೆಗಳ ಸದ್ದು, ಪಶ್ಚಿಮಾಭಿಮುಖವಾಗಿ ವಿರಾಜಮಾನವಾಗಿರುವ ಪ್ರಾಚೀನ ಕಾಲದ ಸ್ವಯಂಭೂ ಗಣಪತಿ(ಗಣಪತಿ ಪುಲೆ) ಭಕ್ತರ ಹರಕೆಯನ್ನು ತೀರಿಸುವ ಏಷಿಯಾ ಖಂಡದಲ್ಲಿಯೇ ಅತ್ಯಂತ ಶ್ರೀಮಂತವಾಗಿರುವ ಬುಧವಾರ ಪೇಟೆಯಲ್ಲಿರುವ ದಗಡು ಶೇಟ್(ಪುಣೆ) ಹಲವಾಯಿ ಗಣಪತಿ, ಮುಂಬೈದಲ್ಲಿರುವ ಲಾಲ್‌ಬಾಗ್ ರಾಜಾ ಎಂದೇ ಖ್ಯಾತಿ ಪಡೆದಿರುವ ಖ್ಯಾತ ಬಾಲಿವುಡ್ ತಾರೆಯರು, ಹಿರಿಯ ರಾಜಕಾರಣಿಗಳು, ಸಾಗರೋಪಾದಿಯಲ್ಲಿ ದರ್ಶನಕ್ಕಾಗಿ ಓಡೋಡಿ ಬರುವ ಭಕ್ತರ ದಂಡು ಇವು ಮಹಾರಾಷ್ಟ್ರದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗಣೇಶ ಹಬ್ಬಕ್ಕೆ ಸಾಕ್ಷಿಯಾಗಿದ್ದವು.
ದಗಡು ಶೇಟ್ ಗಣಪತಿ ಇತಿಹಾಸ:
ಪ್ಲೇಗ್ ಎಂಬ ಸಾಂಕ್ರಾಮಿಕ ಕಾಯಿಲೆಯಿಂದ ತಮ್ಮ ಏಕೈಕ್ ಪುತ್ರನನ್ನು ಕಳೆದುಕೊಂಡು, ಜತೆಗೆ ವ್ಯವಹಾರದಲ್ಲಿಯೂ ಭಾರಿ ನಷ್ಟ ಅನುಭವಿಸಿ, ಕರ್ನಾಟಕದಿಂದ ಪುಣೆಗೆ ವಲಸೆ ಹೋಗಿ, ದಗಡು ಶೇಟ್, ಪತ್ನಿ ಲಕ್ಷ್ಮೀಬಾಯಿ ಶೇಟ್ ಪಂಡಿತರ ಬಳಿ ಅವರ ವಿಚಾರಿಸಿದಾಗ, (1952ರಲ್ಲಿ) ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ,ಪೂಜಿಸಿದರೇ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಜ್ಯೋತಿಷಿ ಸಲಹೆ ನೀಡಿದ್ದರು. ಅಂದು ಕರ್ನಾಟಕದವರೇ ಆಗಿದ್ದ ಗದಗ ಶಿಲ್ಪಕಾರ ನಾಗಲಿಂಗಪ್ಪ ಆಚಾರ್ಯ ಎಂಬುವರು 60 ವರ್ಷಗಳಿಗೊಮ್ಮೆ ಬರುವ ಮುಸ್ಸಂಜೆಯ ಬ್ರಾಹ್ಮೀ ಮೂಹರ್ತದಲ್ಲಿ ಈ ಗಣೇಶ ವಿಗ್ರಹವನ್ನು ತಯಾರಿಸಿದ್ದರು.(ಆ ಮುಹೂರ್ತದಲ್ಲಿ ತಯಾರಿಸುವ ಮೂರ್ತಿಗೆ ಮಾತ್ರ ಅಂತ ಶಕ್ತಿ ಬರುತ್ತದೆ ಎಂಬ ನಂಬಿಕೆಯಿದೆ) ಕೇವಲ ಒಂದೇ ಗಂಟೆಯಲ್ಲಿ ಲೋಹ ಅಥವಾ ಶಿಲೆಯಲ್ಲಿ ಅಷ್ಟೊಂದು ಬೇಗ ಮೂರ್ತಿಯನ್ನು ತಯಾರಿಸುವುದು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಪಿಒಪಿಯಲ್ಲಿ ಮೂರ್ತಿ ತಯಾರಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದರು.
60 ಸಾವಿರ ಡೈಮಂಡ್‌ಗಳಲ್ಲಿ ಪುನರ್ ನಿರ್ಮಾಣ:
ದಗಡು ಶೇಟ್ ಗಣೇಶನನ್ನು ಅತ್ಯಂತ ಬೆಲೆಬಾಳುವ 60 ಸಾವಿರ ವಜ್ರಗಳಿಂದ ನಿರ್ಮಿಸಲಾಗಿದೆ. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ. ಅಂದಿನಿಂದ ಇಲ್ಲಿಯವರೆಗೂ ಈ ಗಣೇಶ ವಿಶ್ವವಿಖ್ಯಾತಿಯನ್ನು ಪಡೆದಿದ್ದು, ಬೇಡಿದ್ದನ್ನು ಕರುಣಿಸುವ ಕೋಟ್ಯಂತರ ಭಕ್ತಾಧಿಗಳ ಆರಾಧ್ಯ ದೇವರಾಗಿದ್ದಾನೆ. ಇಂದಿಗೂ ದೇಶ-ವಿದೇಶಗಳಿಂದ ಭಕ್ತಾಧಿಗಳು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ಮೊದಲು ಚಿಕ್ಕ ದೇವಸ್ಥಾನವಾಗಿದ್ದ ಗಣೇಶ ಮಂದಿರವನ್ನು ಆಯೋಧ್ಯ ವಿವಾದ (1996ರಲ್ಲಿ)ಸಂಕಲ್ಪ ಮಾಡಿದ್ದ ದಗಡು ಶೇಟ್ ಹಲವಾಯಿ ಗಣಪತಿ ಟ್ರಸ್ಟ್ ದವರು ‘ರಾಮಮಂದಿರ’ ವಾಸ್ತುಶಿಲ್ಪದ ಶೈಲಿಯಲ್ಲಿ ಈ ದೇವಸ್ಥಾನವನ್ನು ಲ್ಯಾಟ್‌ರೈಟ್ ಮಣ್ಣಿನ ಇಟ್ಟಿಗೆಗಳಿಂದ ನಿರ್ಮಿಸಿದ್ದಾರೆ. ಈ ದೇವಸ್ಥಾನಕ್ಕೆ ಬರುವ ಆದಾಯವನ್ನು ಟ್ರಸ್ಟ್ ಮೂಲಕ ದೇವದಾಸಿಯರ ಮಕ್ಕಳಿಗೆ ಊಟ-ವಸತಿ ಹಾಗೂ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿದ್ದು, ಜತೆಗೆ ಸಾಸೂನ್ ಆಸ್ಪತ್ರೆಯನ್ನು ತೆರೆಯಲಾಗಿದ್ದು, ಇಲ್ಲಿಯೂ ವಿವಿಧ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ.ಇನ್ನೂಳಿದ ಹಣವನ್ನು ದೇವಸ್ಥಾನದ ಮೇಲ್ವಿಚಾರಣೆಗಾಗಿ ಬಳಸಲಾಗುತ್ತಿದೆ.
ಅಂತಾರಾಷ್ಟ್ರೀಯ ಗಣೇಶ ಉತ್ಸವ:
ಮುಂಬೈನ ಲಾಲ್‌ಬಾಗ್ ರಾಜಾ ಹಾಗೂ ದಗಡು ಶೇಟ್ ಹಲವಾಯಿ ಗಣೇಶ ದೇವಸ್ಥಾನಗಳ ಬಗ್ಗೆ ದೇಶ-ವಿದೇಶಗಳಿಂದ ಆಗಮಿಸುವ ಭಕ್ತರಿಗೆ ಎಲ್ಲ ರೀತಿಯ ಗಣೇಶ ದೇವಸ್ಥಾನಗಳ ಹಿರಿಮೆ-ಗರಿಮೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಮಹಾರಾಷ್ಟ್ರದ ಪ್ರವಾಸೋದ್ಯಮ ಇಲಾಖೆಯು ‘ಅಂತಾರಾಷ್ಟೀಯ ಗಣೇಶ ೆಸ್ಟಿವಲ್’ ಎಂದು ಆಚರಿಸುತ್ತಿದ್ದು, ಇದಕ್ಕೆ ವಿಶ್ವದೆಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಭದ್ರಬುನಾದಿ ಹಾಕಿದ್ದ ದಿ.ಬಾಲಗಂಗಾಧರ ತಿಲಕ್ ಅವರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ.
500 ಕೋಟಿ ರೂ.ವೆಚ್ಚದಲ್ಲಿ ಶಿವಾಜಿ ಮಹಾರಾಜರ ಗತವೈಭವ ನಿರ್ಮಾಣ
ಮಹಾರಾಷ್ಟ್ರ ಸರ್ಕಾರ ಅಲ್ಲಿನ ಪ್ರವಾಸೋದ್ಯಮ ಇಲಾಖೆಯು ಅಂದಾಜು 120 ಎಕರೆ ವಿಶಾಲವಾದ ಪ್ರದೇಶದಲ್ಲಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಹಿಂದವಿ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜರ ಗತವೈಭವ (ಬಾಲ್ಯ ಜೀವನ, ಶಿಕ್ಷಣ ಹಾಗೂ ರಾಜ್ಯಭಾರ ಮಾಡಿದ ರಾಜ್ಯಾಭಿಷೇಕ ದೃಶ್ಯಗಳನ್ನು ಸಾರುವ, 16ನೇ ಶತಮಾನದಲ್ಲಿಯೇ ಗೆರಿಲ್ಲಾ ಯುದ್ಧದ ರಣತಂತ್ರಗಳನ್ನು ಹೆಣೆದು ಯುದ್ಧಗಳನ್ನು ಗೆದ್ದು ಮೊಗಲದ ಸಾಮ್ರಾಜ್ಯಗಳನ್ನು ವಶಪಡಿಸಿಕೊಂಡಿರುವ ಸಾಹಸಗಾಥೆಯನ್ನು ಬಣ್ಣಿಸುವ ಮ್ಯೂಜಿಯಂಗೆ ನಿರ್ಮಾಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಪುಣೆ ತಾಲೂಕಿನ ಹಳ್ಳಿಯೊಂದರಲ್ಲಿ ಖಾಸಗಿ ಅವರಿಗೆ 3.50 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ‘ಶಿವಸೃಷ್ಠಿ’ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಆಕರ್ಷಣಿಯ ತಾಣವಾಗಿದೆ. ಮರಾಠಿಗರ ಗತವೈಭವ ಸಾರುವ ‘ಶನಿವಾರವಾಡಾ’ ಕೂಡ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಜತೆಗೆ ಮರಾಠಿಗರು ತಯಾರಿಸುವ ಸಾವಜಿ ಶೈಲಿಯ ವೆಜ್-ನಾನ್‌ವೇಜ್ ವಿವಿಧ ಭಕ್ಷ್ಯಗಳನ್ನು ಸವಿಯಬಹುದಾಗಿದೆ.
ಶಿವಸೃಷ್ಠಿ ವಿಶೇಷ:
ಅರಬ್ಬಿ ಸಮುದ್ರದ ಪುಣೆ ತಾಲೂಕಿನ ಗ್ರಾಮವೊಂದರಲ್ಲಿ ಶಿವನೇರಿ(ಶಿವಾಜಿ ಮಹಾರಾಜರ ಜನ್ಮಭೂಮಿ), ರಾಯಗಢ(ಶಿವಾಜಿ ಮಹಾರಾಜರ ರಾಜಧಾನಿ), ಸಿಂಹಗಢ, ಹಾಗೂ ಶಿವಾಜಿ ಮಹಾರಾಜರ ಶತ್ರುಗಳ ಇತಿಹಾಸ, ಪೆಂಟಿಂಗ್‌ಗಳನ್ನು ಸಂಗ್ರಹಿಸಿಡಲಾಗಿದೆ. ಶಿವಾಜಿ ಮಹರಾಜರ ಕಾಲದ ಕೆಲವು ಮಹತ್ವದ ಆಯುಧಗಳನ್ನು ರಕ್ಷಿಸಿ ಇಡಲಾಗಿದ್ದು, ಇದು ಯುವಕರಿಗೆ ಸ್ಫೂರ್ತಿ ನೀಡುವ ತಾಣವಾಗಿದೆ. ‘ಶಿವಸೃಷ್ಠಿ’ ನಿರ್ಮಿಸಲು 25 ಕೋಟಿ ರೂ.ಗಳ ವೆಚ್ಚದಲ್ಲಿ ಖರ್ಚು ಮಾಡಲಾಗಿದೆ. ಪುಣೆ ನಗರದಿಂದ ಸುಮಾರು 20 ಕಿ.ಮಿ ದೂರದಲ್ಲಿರುವ ಕ್ರಿ.ಪೂ. 2-5ನೇ ಶತಮಾನದ ಅವಧಿಯಲ್ಲಿ ರಚಿಸಲಾಗಿದೆ ಎಂದು ನಂಬಲಾಗಿರುವ ಬುದ್ಧನ ಮೂರ್ತಿಯಿರುವ ಕಲಾಕೃತಿಯಿರುವ ಕರ್ಲಾ ಗುಹೆಗಳು ಪ್ರಸಿದ್ಧವಾಗಿವೆ. ಸ್ವಯಂಭೂ ಗಣೇಶ(ಗಣಪತಿ ಪುಲೆ)ರತ್ನಗಿರಿ ಜಿಲ್ಲೆಯೆಂಬುದು ಅಮೂಲ್ಯ ಅಪಾರವಾದ ವನ್ಯ ಸಂಪತ್ತು ಗಿರಿ ಶೃಂಗಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿರುವುದರಿಂದ ‘ರತ್ನ’ಗಿರಿ ಎಂಬ ಹೆಸರು . ಮಹಾರಾಷ್ಟ್ರದ ದಕ್ಷಿಣ ಭಾಗದ ಗಡಿಜಿಲ್ಲೆಯಾಗಿದ್ದು, ಗೋವಾ ರಾಜ್ಯದ ಜತೆ, ಕೊಲ್ಲಾಪುರ, ಸಿಂಧದುರ್ಗ ಜಿಲ್ಲೆಗಳ ಜತೆ ಗಡಿಯನ್ನು ಹಂಚಿಕೊಂಡಿದೆ. ಇದು ಮಹಾರಾಷ್ಟ್ರದ ಮುಕುಟಮಣಿ ಇದ್ದಂತೆ. ಕ್ರಿಕೇಟ್ ದೇವರು ಎಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್, ವಿನೋಬಾ ಭಾವೆ, ಖ್ಯಾತ ಮರಾಠಿ ಕವಿ ಕೇಶವಸುತ ಜನಿಸಿದ ರತ್ನಾಗಿರಿ ಜಿಲ್ಲೆಯು ಅರಬ್ಬಿ ಸಮುದ್ರಕ್ಕೆ ಚಾಚಿಕೊಂಡಿದೆ. ಅಂದಾಜು 8 ಸಾವಿರ ಚದರ್ ಅಡಿ ವಿಸ್ತಾರವಾಗಿದೆ. ಗಣಪತಿ ಪುಲೆ ಹೊಬಳಿಯಾಗಿದ್ದು,
ಪ್ರಾಚೀನ ಕೊಂಕಣ
ಪಶ್ಚಿಮ ಬೆಟ್ಟದ ಸೆರೆಗಿನಲ್ಲಿರುವ ವನ್ಯಸಂಪತ್ತನ್ನು ಪರಿಚಯಿಸುವುದಕ್ಕಾಗಿ ಮಹಾರಾಷ್ಟ್ರದ ಟ್ರಸ್ಟ್‌ವೊಂದು ಪ್ರಾಚೀನಕಾಲದ ಗಿಡ-ಮರಗಳನ್ನು ಸಂರಕ್ಷಿಸುವುದರ ಜತೆಗೆ ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಮ್ಯಾಜಿಕ್ ಶೋ, 3ಡಿ ಶೋ, ಸೌಲಭ್ಯ ಕಲ್ಪಿಸಲಾಗಿದೆ. ದಟ್ಟಾರಣ್ಯಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಮಸಾಲೆ ಪದಾರ್ಥಗಳಿಗೆ ಬೇಕಾಗುವ ಕರಿಮೆಣಸು, ದಾಲ್ಚಿನ್ನಿ, ಕರಿಬೇವು, ಸೇರಿ ವಿವಿಧ ಜಾತಿಯ ಮರಗಳನ್ನು ಸಂರಕ್ಷಿಸಲಾಗಿದೆ. ಜತೆಗೆ ಗ್ರಾಮೀಣ ಸೊಗಡಿನ ಜೀವನ ಪದ್ಧತಿಯನ್ನು ಸಾರಿ ಹೇಳುವ ರಾಕ್ ಗಾರ್ಡ್‌ನ್‌ದಲ್ಲಿ ಪ್ರತಿಕೃತಿಗಳನ್ನು ಮೂರ್ತಿಗಳ ಪ್ರದರ್ಶನವಿದೆ.
ಪ್ರವಾಸಿಗರನ್ನು ಕೈಬಿಸಿ ಕರೆಯುವ ಆರೇ-ವ್ಹಾರೇ ಬೀಚ್:
ರತ್ನಗಿರಿ ಜಿಲ್ಲೆ ನಯನಮನೋಹರ (ಆರೇ-ವ್ಹಾರೇ)ಬೀಚ್‌ದಲ್ಲಿ ಅನೇಕ ಹಿಂದಿ ಚಲನಚಿತ್ರಗಳ ಶೂಟಿಂಗ್ ಆಗಾಗ ನಡೆಯುತ್ತಿದೆ. ಇತ್ತೀಚೆಗೆ ತೆರೆ ಕಂಡಿರುವ ದೃಶ್ಯಂನ ಚಿತ್ರ ಕೆಲವು ತುಣುಕಗಳನ್ನು ಇಲ್ಲಿಯೇ ಶೂಟಿಂಗ್ ಮಾಡಲಾಗಿದೆ. ಈ ಮರಾಠಿಯಲ್ಲಿ ‘ಆರೇ’ ಅಂದ್ರೇ ಬನ್ನಿ ಎಂದರ್ಥ ‘ವ್ಹಾರೇ’ ವಾಹ್ ಎಂಬರ್ಥವಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಮಹಾರಾಷ್ಟ್ರದ ಗಣೇಶ ಹಬ್ಬವು ನಮಗೆ ಎಲ್ಲ ಕಾಲದಲ್ಲಿಯೂ ಹೃದಯಸ್ಪರ್ಶಿಯಾಗಿದೆ. ಈ ಬಾರಿ ಅಂತಾರಾಷ್ಟ್ರೀಯ ಗಣೇಶ ಹಬ್ಬದ ಆಚರಣೆ ಮೂಲಕ ಜಾಗತಿಕ ಮಟ್ಟದ ವೇದಿಕೆಗಳಲ್ಲಿ ನಮ್ಮ ಶ್ರೀಮಂತ ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರದರ್ಶಿಸಿದ್ದೇವೆ. ಹಾಗಾಗಿ ವಿಶ್ವದೆಲ್ಲಡೆಯಿಂದ ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗಿದೆ. ಇದು ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಾಯಕಾರಿಗಿದೆೆ.-ಡಿ.ಎನ್.ಪಾಟೀಲನಿರ್ದೇಶಕರು, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಅಘಾಖಾನ್ ಪ್ಯಾಲೇಸ್:ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ಪತ್ನಿ ಕಸ್ತೂರಿಬಾಯಿ ವಾಸವಾಗಿದ್ದ ಅಘಾಖಾನ್ ಪ್ಯಾಲೇಸ್ ಆವರಣದಲ್ಲಿ ಅವರ ಸಮಾಧಿಯಿದ್ದು, ಅದರ ಪಕ್ಕದಲ್ಲಿಯೇ ಗಾಂಧೀಜಿ ಅವರ ಚಿತಾಭಸ್ಮವಿರುವ ಸಮಾಧಿಯಿದೆ. ಕೆಳಕರ್ ಮ್ಯೂಜಿಯಂತದಲ್ಲಿ ಪೇಶ್ವೆ ಕಾಲದ ಆಯುಧಗಳು, ರಾಜಾರಾಣಿಯರು ಯುದ್ಧದಲ್ಲಿ ಬಳಸುವ ಲೋಹದ ರಕ್ಷಾಕವಚ, ಅಂದಿನ ಕಾಲದ ಗೃಹ ಉಪಯೋಗಿ ತಾಮ್ರ ಹಾಗೂ ಹಿತ್ತಾಳೆಯಲ್ಲಿ ತಯಾರಿಸಿದ ವಸ್ತುಗಳು, ಬಟ್ಟೆ ಹಾಗೂ ಪೆಂಟಿಂಗ್‌ಗಳನ್ನು ಸಂರಕ್ಷಿಸಿ ಇಡಲಾಗಿದೆ.