ಮಹಾರಾಷ್ಟ್ರಕ್ಕೆ ನೀರು ಬಿಡುವುದು ಬೇಡ

8..4
ಸದಲಗಾ ದೂಧಗಂಗಾ ಬ್ಯಾರೇಜ್ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲೂಕು ಘಟಕದಿಂದ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ನಾಗೇಶ ಮಾಳಿ, ವಿಶಾಲ ಕುಡಚೆ, ಸಂಜು ಲಠ್ಠೆ, ಚನ್ನಪ್ಪ ಬಡಿಗೇರ, ರಾಜೇಂದ್ರ ಪಾಟೀಲ, ಅಪ್ಪು ಬಾನಸೆ, ಮಹೇಶ ಶೆಟ್ಟಿ, ಅಮಿತ ಉಪ್ಪಾರ, ರಾಕೇಶ ಪಾಟೀಲ, ರಾಮಾ ಹಂಡೆ ಇದ್ದರು.
Published on

ಚಿಕ್ಕೋಡಿ ಗ್ರಾಮೀಣ: ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ಸುಳಕೂಡ ಬ್ಯಾರೇಜ್ ಮುಖಾಂತರ ದೂಧಗಂಗಾ ನದಿಗೆ ಹರಿದು ಬರುವ ನೀರನ್ನು ಮಹಾರಾಷ್ಟ್ರ ಸರಕಾರವು ಇಚಲಕರಂಜಿ ಪಟ್ಟಣಕ್ಕೆ ಪೂರೈಕೆ ಮಾಡುವ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಸದಲಗಾದ ದೂಧಗಂಗಾ ಬ್ಯಾರೇಜ್ ಎದುರು ಪ್ರತಿಭಟಿಸಿ ಚಿಕ್ಕೋಡಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಸದಲಗಾ ಉಪತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮಹಾರಾಷ್ಟ್ರ ಸರ್ಕಾರ ಒಡಂಬಡಿಕೆಯಂತೆ 4 ಟಿಎಂಸಿ ನೀರು ಕರ್ನಾಟಕಕ್ಕೆ ಸರಬರಾಜು ಮಾಡಬೇಕು. ಗಡಿಭಾಗದ ಜೀವನದಿಯಾದ ದೂಧಗಂಗಾ ನದಿ ನೀರನ್ನು ಸುಳಕೂಡ ಬ್ಯಾರೇಜ್‌ನಿಂದ ಮಹಾರಾಷ್ಟ್ರದ ಇಚಲಕರಂಜಿ ನಗರಕ್ಕೆ ಹರಿಸಲು ಅನುಮೋದನೆ ನೀಡಿ ಮಂಜೂರು ಮಾಡಿದೆ. ಕರ್ನಾಟಕದ ಸುಮಾರು 40 ಹಳ್ಳಿಗಳ ಕುಡಿಯುವ ನೀರು ಹಾಗೂ ಕೃಷಿಗೆ ಬೇಕಾಗುವ ನೀರನ್ನು ಮಹಾರಾಷ್ಟ್ರ ಸರ್ಕಾರವೇ ಉಪಯೋಗಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು. ಯೋಜನೆಗೆ ಮಹಾರಾಷ್ಟ್ರದ 125 ಹಳ್ಳಿಗಳು ಸಹ ವಿರೋಧ ವ್ಯಕ್ತಪಡಿಸುವುದರಿಂದ ರಾಜ್ಯ ಸರ್ಕಾರ ಗಡಿ ಕನ್ನಡಿಗರ ಹಿತದೃಷ್ಟಿಯಿಂದ ಮಹಾರಾಷ್ಟ್ರದ ಯೋಜನೆ ತಡೆಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕರವೇ ತಾಲೂಕಾಧ್ಯಕ್ಷ ನಾಗೇಶ ಮಾಳಿ, ಯುವ ಘಟಕ ಅಧ್ಯಕ್ಷ ವಿಶಾಲ ಕುಡಚೆ, ಸದಲಗಾ ಅಧ್ಯಕ್ಷ ಸಂಜು ಲಠ್ಠೆ, ಕಾರ್ಯಕರ್ತರಾದ ಚನ್ನಪ್ಪ ಬಡಿಗೇರ, ರಾಜೇಂದ್ರ ಪಾಟೀಲ, ಅಪ್ಪು ಬಾನಸೆ, ಮಹೇಶ ಶೆಟ್ಟಿ, ಅಮಿತ ಉಪ್ಪಾರ, ರಾಕೇಶ ಪಾಟೀಲ, ರಾಮಾ ಹಂಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net