ಮಹಾರಾಜ ಅವರಿಗೆ ನುಡಿ ನಮನ

31-10 ctpr 9
Published on

ಚಿತ್ತಾಪುರ: ಪಟ್ಟಣದ ಜೈ ಸೇವಾಲಾಲ ಕಟ್ಟೆಯ ಬಳಿ ಬಂಜಾರ ಸಮಾಜದ ತಾಲೂಕು ಘಟಕದ ವತಿಯಿಂದ ಲಿಂಗೈಕ್ಯ ಶ್ರೀ ರಾಮರಾವ ಮಹಾರಾಜ ಅವರಿಗೆ ಶನಿವಾರ ನುಡಿನಮನ ಸಲ್ಲಿಸಲಾಯಿತು. ಬಂಜಾರಾ ಸಮಾಜದ ತಾಲೂಕು ಅಧ್ಯಕ್ಷ ರವಿ ರಾಠೋಡ್ ಮಾತನಾಡಿ, ರಾಮರಾವ ಮಹಾರಾಜರು ಸಮಾಜದ ಏಳ್ಗೆಗೆ ಶ್ರಮಿಸುತ್ತಿದ್ದರು. ಇವರು ಲಿಂಗೈಕ್ಯರಾಗಿರುವುದರಿಂದ ಸಮಾಜಕ್ಕೆ ನಷ್ಟವಾಗಿದೆ ಎಂದು ಹೇಳಿದರು. ಪೋಮು ಪೂಜಾರಿ ಪೂಜೆ ಸಲ್ಲಿಸಿದರು. ಪ್ರಮುಖರಾದ ಭೀಮಾ ನಾಯಕ, ತುಕಾರಾಮ ನಾಯಕ, ಗೋವಿಂದ ನಾಯಕ, ರಾಮದಾಸ ಚವ್ಹಾಣ, ಜಗದೀಶ ಚವ್ಹಾಣ, ತಿರುಪತಿ ಚವ್ಹಾಣ, ಚಂದರ ಚವ್ಹಾಣ, ಗೋಪಾಲ ರಾಠೋಡ್, ಅಶ್ವಥ ರಾಠೋಡ್, ಮನೋಜ ರಾಠೋಡ್, ಕವಿತಾ ಚವ್ಹಾಣ, ರಾಜು ರಾಠೋಡ್, ರವಿ ಪವಾರ, ಆಕಾಶ ಚವ್ಹಾಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net