ಮಹಾಮಾರಿಗೆ ಮತ್ತಿಬ್ಬರು ಬಲಿ

carona logo
Published on

ಗದಗ: ಜಿಲ್ಲೆಯಲ್ಲಿ ಭಾನುವಾರ 196 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 134 ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಕಳಸಾಪುರ ರಸ್ತೆ, ವಕ್ಕಲಗೇರಿ ಓಣಿ, ರಾಜೀವಗಾಂಧಿ ನಗರ, ವಿವೇಕಾನಂದ ನಗರ, ಜಿಮ್್ಸ ಆಸ್ಪತ್ರೆ, ಬೆಟಗೇರಿ, ಸಂಭಾಪುರ ರಸ್ತೆ, ಎಸ್.ಬಿ. ನಗರ, ಕುಲಕರ್ಣಿಗಲ್ಲಿ, ಡಿ.ಸಿ. ಮಿಲ್, ಮಸಾರಿ, ಶಿವನಾಗ ನಗರ, ಹುಯಿಲಗೊಳ ಓಣಿ, ವೀರನಾರಾಯಣ ದೇವಸ್ಥಾನದ ಹತ್ತಿರ, ಕಣವಿ ಪ್ಲಾಟ್, ಆರ್.ಕೆ. ನಗರ, ಎ.ಎಸ್.ಎಸ್. ಕಾಲೇಜ್ ಹತ್ತಿರ, ಗಾಂಧಿ ನಗರ, ದಾಸರ ಓಣಿ, ಶಹಾಪುರ ಪೇಟೆ, ರಂಗನವಾಡ, ನರಸಾಪುರ, ಶಿವಬಸವ ನಗರ, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಶಿವಾನಂದ ನಗರ, ವೆಲ್ಪೇರ್ ಟೌನ್ ಶಿಪ್, ಹೆಲ್ತ್​ಕ್ಯಾಂಪ್, ದೇಶಪಾಂಡೆ ಓಣಿ, ಎಸ್.ಬಿ. ನಗರ, ಟ್ಯಾಗೋರ್ ರಸ್ತೆ, ಹುಬ್ಬಳ್ಳಿ ರಸ್ತೆ, ಗದಗ ತಾಲೂಕಿನ ಮುಳಗುಂದ, ಬೆನಕೊಪ್ಪ, ಕಬಲಾಯತಕಟ್ಟಿ, ಸೊರಟೂರ, ಅಡವಿ ಸೋಮಾಪುರ, ಶಿರುಂಜ, ಅಸುಂಡಿ, ಬೆಳದಡಿ, ಕೋಟುಮಚಗಿ, ಯಲಿಶಿರೂರ, ನಾಗಾವಿ ತಾಂಡಾ, ನೀರಲಗಿ, ಹೊಂಬಳ.

ಮುಂಡರಗಿ ಪಟ್ಟಣದ ಎಸ್.ಎಸ್. ಪಾಟೀಲ ನಗರ, ಬಸ್ ನಿಲ್ದಾಣದ ಹತ್ತಿರ, ನೇಕಾರ ಓಣಿ, ಪೊಲೀಸ್ ಠಾಣೆ, ಎ.ಬಿ. ನಗರ, ಜಾಗೃತ ವೃತ್ತ, ಎಚ್.ಎಂ. ನಗರ, ಬಸವೇಶ್ವರ ನಗರ, ಬೃಂದಾವನ ವೃತ್ತ, ಚುಡಿ ನಗರ, ಮುಂಡರಗಿ ತಾಲೂಕಿನ ಡಂಬಳ, ಡೋಣಿ, ಸಿಂಗಟರಾಯನಕೇರಿ ತಾಂಡಾ, ಅತ್ತಿಕಟ್ಟಿ, ಕದಾಂಪುರ, ಹಮ್ಮಗಿ, ಹಿರೇವಡ್ಡಟ್ಟಿ.

ನರಗುಂದ ಪಟ್ಟಣದ ಎನ್.ಎಚ್.ಟಿ. ಮಿಲ್, ಟಿ.ಎಲ್.ಎಚ್, ಕಸಬಾ ಓಣಿ, ಅಧ್ಯಾಪಕ ನಗರ, ನರಗುಂದ ತಾಲೂಕಿನ ಕೊಣ್ಣೂರು, ಚಿಕ್ಕ ನರಗುಂದ, ಕುರ್ಲಗೇರಿ, ದಂಡಾಪುರ, ಬನಹಟ್ಟಿ, ಶಿರೋಳ. ರೋಣ ಪಟ್ಟಣದ ಹತ್ತಿಯವರ ಓಣಿ, ರೋಣ ತಾಲೂಕಿನ ಸೋಮನಕಟ್ಟಿ, ಮಾರನಬಸರಿ, ಇಟಗಿ, ನಿಡಗುಂದಿ, ಹಿರೇಹಾಳ, ನರೇಗಲ್, ಹಿರೇಮಲ್ಲಾಪುರ, ದಿಂಡೂರ. ಗಜೇಂದ್ರಗಡ ಪಟ್ಟಣದ ವಡ್ಡರ ಓಣಿ, ಜನತಾ ಪ್ಲಾಟ್, ಮಾದರ ಓಣಿ, ಜವಳಿ ಪ್ಲಾಟ್, ಕಲ್ಮಠ ಪ್ಲಾಟ್, ನೇಕಾರ ಕಾಲನಿ, ಕೆ.ಎಚ್.ಡಿ.ಸಿ, ಗಂಜಿ ಪೇಟೆ, ಬಸವೇಶ್ವರ ನಗರ, ಹೊಲವಾಡ ಪ್ಲಾಟ್, ವಾಣಿ ಪೇಟೆ.

ಶಿರಹಟ್ಟಿ ಪಟ್ಟಣದ ತಾಂಗೋಡ, ನವನಗರ, ವಿಜಯನಗರ, ಕಚೇರಿ ಪ್ಲಾಟ್, ಅಂಬೇಡ್ಕರ್ ನಗರ, ಶಿರಹಟ್ಟಿ ತಾಲೂಕಿನ ಹೆಬ್ಬಾಳ, ಶಿಗ್ಲಿ, ಕುಸಲಾಪುರ, ಬೆಳ್ಳಟ್ಟಿ, ವರವಿ, ಸೂರಣಗಿ, ಜಲ್ಲಿಗೇರಿ, ಲಕ್ಷ್ಮೇಶ್ವರ ಪಟ್ಟಣದ ಹಿರೇಬಣ, ವಡವಿ ಹೊಸೂರ, ಛಬ್ಬಿ, ಹೊಸಳ್ಳಿ, ಬಸಾಪುರ, ರಾಮಗಿರಿ, ಗೊಜನೂರ, ದೇವಿಹಾಳ ಗ್ರಾಮದಲ್ಲಿ ಸೋಂಕು ಪತ್ತೆಯಾಗಿದೆ. ಗದಗ ತಾಲೂಕಿನ 60 ವರ್ಷದ ಪುರುಷ, ರೋಣ ತಾಲೂಕಿನ ಹಿರೇಮಣ್ಣೂರ ಗ್ರಾಮದ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net