ಮಹಾಮಾರಿ ತಡೆಗೆ ಮುಂಜಾಗ್ರತೆ

14-gdg-1
Published on

ಗದಗ: ಕರೊನಾ ವೈರಸ್ ತಡೆಗೆ ಪ್ರತಿಯೊಬ್ಬರು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾ. 16ರಂದು ಆಯೋಜಿಸಿದ್ದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಅವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಾಗೂ ಮಾ. 21, 22ರಂದು ನಡೆಯಬೇಕಿದ್ದ ಲಕ್ಕುಂಡಿ ಉತ್ಸವವನ್ನು ರದ್ದುಪಡಿಸಲಾಗಿದೆ’ ಎಂದರು.

ಕರೊನಾ ಹಿನ್ನೆಲೆಯಲ್ಲಿ ಯಾರೂ ಆವೇಶಕ್ಕೆ ಒಳಗಾಗಬಾರದು. ಜನರು ಆತಂಕ ಪಡುವಂತಹ ಯಾವುದೇ ಕಾಯರ್å ಮಾಡಬಾರದು. ಅನ್ಯರ ಭೆೇಟಿ ಸಂದರ್ಭದಲ್ಲಿ ಕೈ ಕುಲುಕುವ ಬದಲು ನಮಸ್ಕಾರ ಮಾಡುವ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಸಿಇಒ ಡಾ. ಆನಂದ ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರೀಗಿಡದ ಇತರರಿದ್ದರು. ನಂತರ ಸಚಿವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪ್ರತ್ಯೇಕ ವಾರ್ಡ್ ಪರಿಶೀಲಿಸಿದರು.

ಕಟ್ಟುನಿಟ್ಟಿನ ಕ್ರಮ: ನಿಗದಿತ ಹಣಕ್ಕಿಂತ ಹೆಚ್ಚಿನ ದರದಲ್ಲಿ ಮಾಸ್ಕ್ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಕುರಿತು ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದ್ದು, ಜಿಲ್ಲೆಯ ಎಲ್ಲ ಫಾರ್ಮಸಿಗಳ ಮಾಲೀಕರಿಗೂ ಈ ಕುರಿತು ನೋಟಿಸ್ ಜಾರಿ ಮಾಡಿ ನಿಗದಿತ ದರದಲ್ಲಿ ಮಾಸ್ಕ್ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ. ಆದೇಶ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

46 ಪ್ರತ್ಯೇಕ ಬೆಡ್ : ಜಿಲ್ಲೆಯ ಎಂಟು ಸರ್ಕಾರಿ ಆಸ್ಪತ್ರೆಗಳಲ್ಲಿ 45 ಹಾಗೂ ಗದಗ ನಗರದ ಚಿರಾಯು ಆಸ್ಪತ್ರೆಯಲ್ಲಿ ಒಂದು ಬೆಡ್ ಸೇರಿ 46 ಪ್ರತ್ಯೇಕ ಬೆಡ್​ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. 256 ವೈದ್ಯ ಸಿಬ್ಬಂದಿ ಬಳಸುವ ರಕ್ಷಣಾತ್ಮಕ ಉಡುಗೆ-ತೊಡುಗೆಗಳ ಕಿಟ್​ಗಳನ್ನು ಹೊಂದಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಮುಂತಾದವುಗಳನ್ನು ಸಿದ್ಧತಾ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು. ಗದಗ ಜಿಲ್ಲಾಸ್ಪತ್ರೆ 10, ನರಗುಂದ, ಮುಂಡರಗಿ, ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ತಲಾ 5, ರೋಣ ಸರ್ಕಾರಿ ಆಸ್ಪತ್ರೆ 6, ಗಜೇಂದ್ರಗಡ ಆಸ್ಪತ್ರೆಯಲ್ಲಿ 4 ಹಾಗೂ ಲಕ್ಷೆ್ಮೕಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ 10 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು

ಮಾಹಿತಿಗಾಗಿ ಸಂರ್ಪಸಿ: ಜಿಲ್ಲೆಯಲ್ಲಿ ಕರೊನಾ ವೈರಸ್ ತಡೆ ಹಾಗೂ ಚಿಕಿತ್ಸೆಗಾಗಿ 8 ವೈದ್ಯರನ್ನು ನೇಮಿಸಲಾಗಿದೆ. ಸಾರ್ವಜನಿಕರು ಅಗತ್ಯ ಬಿದ್ದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಿ.ಸಿ. ಕರಿಗೌಡ್ರ ಮೊ. 99006 74728, ನರಗುಂದದಲ್ಲಿ ಡಾ. ಪ್ರವೀಣ ಮೇಟಿ ಮೊ. 82969 20740, ಮುಂಡರಗಿಯಲ್ಲಿ ಡಾ. ಕೀರ್ತಿಹಾಸ ಮೊ. 80881 55666, ಶಿರಹಟ್ಟಿ ಡಾ. ಚಂದ್ರು ಲಮಾಣಿ ಮೊ. 74113 97106, ರೋಣದಲ್ಲಿ ಡಾ. ಗಿರೀಶ ಗಿರಡ್ಡಿ ಮೊ. 99007 61701, ಗಜೇಂದ್ರಗಡ ಡಾ. ನಾಯಕ ಮೊ. 85911 48998, ಲಕ್ಷೆ್ಮೕಶ್ವರ ಡಾ. ಗಿರೀಶ ಮೊ. 91080 63946, ಗದಗ ಚಿರಾಯು ಆಸ್ಪತ್ರೆಯಲ್ಲಿ ಡಾ. ರೇಣುಕಾ ಮೊ. 99025 29084 ಹಾಗೂ ಆರೋಗ್ಯ ಇಲಾಖೆ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ಅಥವಾ ಸಹಾಯ ಪಡೆಯಬಹುದು.

ವಿದೇಶದಿಂದ ಮರಳಿದ 41 ಜನರ ಮೇಲೆ ನಿಗಾ: ವಿದೇಶ ಪ್ರವಾಸ ಮುಗಿಸಿ ಜಿಲ್ಲೆಗೆ ವಾಪಸಾದ 41 ಜನರ ಮೇಲೆ ನಿಗಾವಹಿಸಲಾಗಿದೆ. ಜಿಲ್ಲೆಯಲ್ಲಿ 6 ಶಂಕಿತ ಪ್ರಕರಣಗಳಲ್ಲಿ 4 ನಕಾರಾತ್ಮಕ ವರದಿ ಬಂದಿದ್ದು ಇನ್ನೂ 2 ಪ್ರಕರಣಗಳ ವರದಿ ಬರಬೇಕಿದೆ ಎಂದು ಸಚಿವರು ಹೇಳಿದರು. ವಿದೇಶದಿಂದ ಯಾರೇ ಬಂದರೂ 14 ದಿನ ಮನೆಯಲ್ಲಿಯೇ ಅವರನ್ನು ಇರುವಂತೆ ನೋಡಿಕೊಳ್ಳಬೇಕು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಕರೊನಾ ವೈರಸ್ ಕುರಿತು ಜಿಲ್ಲಾಧಿಕಾರಿ ನೀಡುವ ದೃಢೀಕರಿಸಿದ ಮಾಹಿತಿಯನ್ನು ಮಾತ್ರ ಮಾಧ್ಯಮದವರು ಬಿತ್ತರಿಸಬೇಕು ಮತ್ತು ಪ್ರಕಟಿಸಬೇಕು. ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಯಾರೂ ನಂಬಬಾರದು ಎಂದರು.

ರಾಜ್ಯ ಸರ್ಕಾರವು ಕರೊನಾ ಕುರಿತು ಜಿಲ್ಲಾಧಿಕಾರಿ ಅವರನ್ನು ಮಾಹಿತಿ ನೀಡುವ ನೋಡೆಲ್ ಅಧಿಕಾರಿ ಎಂದು ನೇಮಿಸಿದೆ. ಜಿಲ್ಲೆಯ ಕರೊನಾ ವೈರಸ್ ಪರಿಸ್ಥಿತಿ ಕುರಿತಂತೆ ಯಾವುದೇ ಮಾಹಿತಿ ಬೇಕಿದ್ದರೂ ನನ್ನನ್ನು ಸಂರ್ಪಸಿ ಖಚಿತ ಪಡಿಸಿಕೊಳ್ಳಬೇಕು.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net