ಮಹಾಮಾರಿ ಕರೊನಾಕ್ಕೆ ಮತ್ತೆರಡು ಬಲಿ

B SHARAT DC Photo
Published on

ಕಲಬುರಗಿ: ಮಹಾಮಾರಿ ಕರೊನಾದಿಂದ ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರಿದಿದೆ. ಶುಕ್ರವಾರ ಜಿಲ್ಲೆಯ ಇಬ್ಬರು ಬಲಿಯಾಗುವ ಮೂಲಕ ಮೃತರ ಸಂಖ್ಯೆ 10ಕ್ಕೇರಿದೆ. ಎರಡು ಸಾವು ಸೇರಿ ಇಂದು 20 ಹೊಸ ಕೇಸ್ಗಳು ದೃಢಪಟ್ಟಿದ್ದು ಒಟ್ಟು ಸಂಖ್ಯೆ 816ಕ್ಕೇರಿದಂತಾಗಿದೆ.
ನಗರ ಮತ್ತು ಚಿಂಚೋಳಿ ತಾಲೂಕಿನ ಒಬ್ಬೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಚಿಂಚೋಳಿ ತಾಲೂಕಿನ ಕೆರೊಳ್ಳಿ ಗ್ರಾಮದ ಗ್ರಾಮದ 48 ವರ್ಷದ ವ್ಯಕ್ತಿ (ಪಿ-6325) ಕಿಡ್ನಿ ವೈಫಲ್ಯ ಮತ್ತು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ. 9ರಂದು ಜಿಮ್ಸ್ ಆಸ್ಪತ್ರೆಗೆ ಸೇರಿಸಿ ರಕ್ತ ಮತ್ತು ಗಂಟಲ ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. 10ರಂದು ಆತ ಅಸುನೀಗಿದ್ದ. ಈತನಿಗೆ ಕರೊನಾ ಅಂಟಿರುವುದು ಶುಕ್ರವಾರ ಖಚಿತವಾಗಿದೆ.
ನಗರದ ಎಂಎಸ್ಕೆ ಮಿಲ್ನ 53 ವರ್ಷದ ವ್ಯಕ್ತಿ (ಪಿ-6323) ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ. 9ರಂದು ಚಿಕಿತ್ಸೆಗಾಗಿ ಈತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಇಂದು ಸೋಂಕು ದೃಢಪಟ್ಟಿದೆ.
816 ಸೋಂಕಿತರಲ್ಲಿ 60 ಜನ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾಜರ್್ ಮಾಡಲಾಗಿದೆ. ಇಂದಿನ 20 ಪ್ರಕರಣಗಳಲ್ಲಿ 16ಕ್ಕೆ ಮಹಾರಾಷ್ಟ್ರ ಲಿಂಕ್ ಇದ್ದು, ಎರಡು ಕೇಸ್ಗಳು ಸೋಂಕಿತರ ಸಂಪರ್ಕದಿಂದ ಬಂದಿವೆ. ಇನ್ನಿಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. 10 ಕಲಬುರಗಿ ತಾಲೂಕು, 1 ಚಿಂಚೋಳಿ, ಐದು ಕಮಲಾಪುರ, ಒಂದು ಸೇಡಂ ಮತ್ತು ಎರಡು ಅಫಜಲಪುರ ತಾಲೂಕಿಗೆ ಸೇರಿದ್ದಾಗಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ಈ ಮಧ್ಯೆ ಇನ್ನೂ ಆರು ಸಾವಿರಕ್ಕೂ ಮೇಲ್ಪಟ್ಟು ವ್ಯಕ್ತಿಗಳ ವರದಿಗಾಗಿ ಕಾಯಲಾಗುತ್ತಿದೆ.

60 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ
ಮಹಾಮಾರಿಯಿಂದ ಬಳಲುತ್ತಿದ್ದ ವಿವಿಧ ಗ್ರಾಮಗಳ 60 ಸೋಂಕಿತರು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗಳಿಗೆ ತೆರಳಿದ್ದಾರೆ. ಸೇಡಂ- ಕೋಲಕುಂದಾ- 2, ಕೋಲಕುಂದಾ ತಾಂಡಾ-9, ಕಾನಗಡ್ಡಾ-2, ಮುಧೋಳ-1. ಅಫಜಲಪುರ: ಬಳೂಗರ್ಿ ತಾಂಡಾ- 2, ಕೊಗನೂರ-1. ಚಿಂಚೋಳಿ: ಚಂದ್ರಪಳ್ಳಿ ತಾಂಡಾ-3, ಭೂಯ್ಯಾರ್ (ಕೆ)-1, ಸಾಲೇಬೀರನಳ್ಳಿ-1. ಚಿತ್ತಾಪುರ: ಹಣಿಕೇರಾ ತಾಂಡಾ-5, ಹಣಿಕೇರಾ ರಾಮನಾಯಕ ತಾಂಡಾ- 5, ನಾಲವಾರ- 3, ರಾವೂರ- 3, ಬುಗಡಿ ತಾಂಡಾ-1, ದೇವಾಪುರ ತಾಂಡಾ -1, ದಿಗ್ಗಾಂವ್-1, ಮಲಗಂದ-1, ರಾಮುನಾಯಕ ತಾಂಡಾ-1, ಯರಗೋಳ-1. ಕಾಳಗಿ: ಬುಗಡಿ ತಾಂಡಾ-1, ಸೂಗೂರ (ಕೆ) ತಾಂಡಾ-1, ಅರಣಕಲ್ ತಾಂಡಾ- 7, ಬೆಡಸೂರ ತಾಂಡಾ- 3. ಜೇವಗರ್ಿಯ ಲಖನಾಪುರ, ಶಹಾಬಾದ್ನ ತರಿ ತಾಂಡಾ, ಕಮಲಾಪುರದ ಡೊಂಗರಗಾಂವ್, ಕಲಬುರಗಿ ನಂದೂರ (ಬಿ) ಗ್ರಾಮದ ತಲಾ ಒಬ್ಬರು ಚೇತರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net