

ಹುಬ್ಬಳ್ಳಿ: ಇಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ನಗರದ ಮೂರುಸಾವಿರ ಮಠ ಸಭಾಭವನದಲ್ಲಿ ಗುರುವಾರ ‘ವಿ-ಜಯ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಡಾ. ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಹುಬ್ಬಳ್ಳಿ ಗಣೇಶೋತ್ಸವವು ಯವುದೇ ಜಾತಿ, ಮತ, ಪಂಥ ಹಾಗೂ ಮೇಲು- ಕೀಳು ಎಂಬ ಭಾವನೆ ಇಲ್ಲದೇ ಸೋದರತ್ವ ಮನೋಭಾವನೆಯಲ್ಲಿ ಆಚರಿಸಲ್ಪಡುತ್ತದೆ. ಮಹಾಮಂಡಳವು ‘ವಿ-ಜಯ’ ಎಂಬ ಪುಸ್ತಕದಿಂದ ಒಳ್ಳೆಯ ವಿಚಾರಗಳು, ಮಾಹಿತಿಯನ್ನು ನೀಡುವ ಜತೆಗೆ ಸಾಹಿತ್ಯದ ಕುರಿತು ಯುವ ಜನಾಂಗದಲ್ಲಿ ಆಸಕ್ತಿ ಬರುವಂತೆ ಮಾಡಿದೆ ಎಂದರು.
ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ ಅವರು ‘ವಿ-ಜಯ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಮಹಾಮಂಡಳವು ಪ್ರತಿ ವರ್ಷ ವಿಶಿಷ್ಟ ಕಾರ್ಯಕ್ರಮ ಅಯೋಜಿಸಿ ಜನರಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತದೆ ಎಂದು ತಿಳಿಸಿದರು.
ಹುಬಳ್ಳಿ ಅರ್ಬನ್ ಬ್ಯಾಂಕ್ ನಿರ್ದೇಶಕ ಶಾಂತರಾಜ ಪೋಳ, ‘ವಿ-ಜಯ’ ಪುಸ್ತಕದ ಸಂಪಾದಕಿ ಪುಷ್ಪಾ ಹಿತ್ತಾಳಿ, ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ, ಎಸ್ಎಸ್ಕೆ ಸಮಾಜದ ರಾಘವೇಂದ್ರ ಮುರಗೋಡ, ಸಮಾಜ ಸೇವಕರಾದ ಅನಿಲ ಕವಿಶೆಟ್ಟಿ, ಪ್ರಕಾಶ ಬುರಬುರೆ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ತಾರಾದೇವಿ ವಾಲಿ, ಸಿದ್ದಣ್ಣ ಅಂಗಡಿ, ಸಾಯಿನಾಥ ಹಿತ್ತಾಳಿ, ಎಂ.ಎಸ್. ಶಿರಗಣ್ಣವರ, ವಿಶ್ವನಾಥ ಹೂಲಿ, ಸಚಿನ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸುಷ್ಮಾ ಕೊಂಗಿ, ಸಂತೋಷ ಕಟ್ಟಿ, ಚಂದ್ರಶೇಖರ ಗಾಣಿಗೇರ, ಸುರೇಂದ್ರ ಜಾಗಿರದಾರ, ಎಸ್.ಎನ್. ಮುಜಾವರ, ಅನಿತಾ ಜಡಿ ಅವರಿಂದ ಸೌಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಅಮರೇಶ ಹಿಪ್ಪರಗಿ, ಸರಸ್ವತಿ ಮೆಹರವಾಡೆ, ಅಕ್ಕಮ್ಮ ಕಂಬಳಿ, ಸಾಧನಾ ಪೂಜಾರ, ಡಾ. ಮಂಜುಳಾ ಹತ್ತಿಮತ್ತೂರ, ಇತರರು ಉಪಸ್ಥಿತರಿದ್ದರು.
ಆಶಾ ಪತ್ತಾರ ಸ್ವಾಗತಿಸಿದರು, ಸವಿತಾ ಚಂದನಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾರಾಮತಿ ಪೋಳ ಪರಿಚಯಿಸಿದರು. ರೂಪಾ ಅಂಗಡಿ ವಂದಿಸಿದರು.