

ಗೋಕಾಕ: ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಅವರ ಮೌಲ್ಯ ಮತ್ತು ಆದರ್ಶ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲೂಕಾಡಳಿತ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿ. ಡಿ.ದೇವರಾಜ ಅರಸು 109ನೇ ಜನ್ಮದಿನ ಆಚರಣೆ ಕಾರ್ಯಕ್ರಮದ ಅಧ್ಯತೆ ವಹಿಸಿ ಅವರು ಮಾತನಾಡಿದರು. ಮಹಾಪುರುಷರ ತತ್ತ ್ವಗಳನ್ನು ಅಧ್ಯಯನ ಮಾಡಬೇಕು ಎಂದರು.
ಟಿ.ಬಿ.ಬಿಲ್ ಉಪನ್ಯಾಸ ನೀಡಿದರು. ವಸತಿ ನಿಲಯದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಸಾಧಕರನ್ನು ಸತ್ಕರಿಸಲಾಯಿತು. ಉದಯಕುಮಾರ್ ಕಾಂಬಳೆ, ಪೌರಾಯುಕ್ತ ರಮೇಶ ಜಾಧವ, ಶಿವಾನಂದ ಬಬಲಿ, ಕೀರಪ್ಪ ಮೇಟಿ, ಎಸ್.ಪಿ.ವರಾಳೆ, ಡಿ.ಎಸ್. ಕುಡವಕ್ಕಲಿಗ, ಅಮೃತ ದಪ್ಪಿನವರ, ಬಿ.ಎ.ಮಾಲದಿನ್ನಿ , ಪಿ.ಆರ್.ಬೇವಿನಗಿಡದ ಉಪಸ್ಥಿತರಿದ್ದರು.