ಮಹಾನ್ ಮಾನವತಾವಾದಿ ಅಂಬೇಡ್ಕರ್

APR 27-HRP-01,.
Published on

ಹರಪನಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ದೇಶದಲ್ಲಿ ಜನಿಸಿದೇ ಹೋಗಿದ್ದರೆ ತುಳಿತಕ್ಕೊಳಗಾದ ಜನತೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿರಲಿಲ್ಲವೆಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬಾಗಳಿ ಗ್ರಾಮದ ಅಂಬೇಡ್ಕರ್ ಕಾಲನಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು. ಪ್ರತಿಯೊಂದು ಗ್ರಾಮದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸುವುದಕ್ಕೂ ಮೊದಲು ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಲು ಆದ್ಯತೆ ನೀಡಬೇಕು. ಅಂಬೇಡ್ಕರ್ ದೇಶದಲ್ಲಿ ಧ್ವನಿಯಿಲ್ಲದೆ ತುಳಿತಕ್ಕೆ ಒಳಗಾದ ಸಮುದಾಯಕ್ಕೆ ಧ್ವನಿಯಾಗಿ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.

ನನ್ನ ಮರಣದ ನಂತರ ಪ್ರತಿಮೆಗಳನ್ನು ನಿರ್ಮಿಸದೆ ಪುಸ್ತಕದಲ್ಲಿ ನನ್ನನ್ನು ನೆನೆಯಬೇಕು ಎಂದು ಅಂಬೇಡ್ಕರ್ ತಿಳಿಸಿದ್ದರು. ಆದರೆ, ಶೋಷಿತ ಸಮಾಜ ಅಂಬೇಡ್ಕರ್ ಅವರನ್ನು ಪುಸ್ತಕದಲ್ಲಿ ಅವರನ್ನು ಕಾಣುವ ಬದಲಿಗೆ ಪ್ರತಿಮೆಗಳ ಮೂಲಕ ಅಂಬೇಡ್ಕರ್ ಅವರನ್ನು ಕಾಣುತ್ತಿದೆ. ಅಂಬೇಡ್ಕರ್ ಅವರು ಅಸ್ಪಶ್ಯತೆ ಎದುರಿಸಿ ಮೇಲೆ ಬಂದರು, ಸಂವಿಧಾನ ರಚನೆಯಿಂದ ಅಸ್ಪಶ್ಯತೆ ನಿವಾರಣೆಯಾಗಿದೆ. ಜಾಗೃತ ಸಮಾಜದ ನಿರ್ಮಾಣಕ್ಕಾಗಿ ಅಂಬೇಡ್ಕರ್ ಪ್ರತಿಮೆಗೆ ಹಾರ-ತುರಾಯಿ ಹಾಕುವ ಬದಲು ಅವರ ಚಿಂತನೆಗಳಾದ ಶಿಕ್ಷಣ, ಸಂಘಟನೆ, ಹೋರಾಟವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಂಘಟನೆ ಹಾಗೂ ಹೋರಾಟ ಇದ್ದರೂ ಶಿಕ್ಷಣದ ಬಗ್ಗೆ ಕಾಳಜಿ ವಹಿಸಲು ಆಗಿಲ್ಲ. ಇದರಿಂದಾಗಿ ಸಾಕಷ್ಟು ಹಿಂದೆ ಉಳಿಯುವಂತಾಗಿದೆ. ಇದರಿಂದಾಗಿ ಸಾಕಷ್ಟು ಸರ್ಕಾರಿ ಸೌಲಭ್ಯಗಳಿದ್ದರೂ ಅವುಗಳನ್ನು ಸದ್ಬಳಕೆ ಮಾಡಿಕೊಂಡು ಮೇಲೆ ಬರಲು ನಾವು ವಿಫಲರಾಗುತ್ತಿದ್ದೇವೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಅವರು ಯಾವುದೇ ಹಿನ್ನೆಲೆಯಿಲ್ಲದೆ ಸ್ವಪ್ರಯತ್ನದಿಂದ ಜಗತ್ತಿಗೆ ಶಾಶ್ವತವಾಗಿ ಬೆಳಕಾಗಿ ನಿಂತಿದ್ದಾರೆ. ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತರಾಗಿಲ್ಲ. ಜಯಂತಿ ಆಚರಣೆ ಮಾಡಿದರೆ ಸಾಲದು ಅವರ ಮೂಲ ತತ್ವಗಳಾದ ಸ್ವಾಭಿಮಾನ, ಶಿಕ್ಷಣ, ಸಂಘಟನೆ ಈ ಗುಣಗಳನ್ನು ಪ್ರತಿಯೊಬ್ಬರೂ ಅರಿತು ಮಕ್ಕಳಿಗೆ ತಿಳಿಸಬೇಕು ಎಂದರು.

ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ಮಾತನಾಡಿ. ಅಂಬೇಡ್ಕರ್ ಅವರ ಮೂರ್ತಿ ನಿರ್ಮಿಸುವುದಷ್ಟೇ ನಮ್ಮ ಕೆಲಸವಾಗದೆ ಅದಕ್ಕೆ ಅಗೌರವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ನೀಲಗುಂದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿದರು.

ಪ್ರಮುಖರಾದ ಬಿ.ಬಿ.ಹೊಸೂರಪ್ಪ, ಮಂಜಪ್ಪ ಹಲಗೇರಿ, ಕಣಿವಿಹಳ್ಳಿ ಮಂಜುನಾಥ, ಮೈದೂರು ರಾಮಣ್ಣ, ಹುಲಿಕಟ್ಟಿ ಚಂದ್ರಪ್ಪ, ಶಿವನಗೌಡ, ಚಿಕ್ಕಳ್ಳಿ ನಾಗಪ್ಪ, ಮುದ್ದಜ್ಜಿ ಚಿನ್ನಪ್ಪ, ಚಾಕರಿ ದುರುಗಪ್ಪ, ಎನ್.ಹಾಲಪ್ಪ, ಚನ್ನಬಸಪ್ಪ, ನಿಂಗರಾಜ್, ಮತ್ತಿಹಳ್ಳಿ ಎ.ಮಂಜುನಾಥ, ಹಲಗಿ ಗೋಣೆಪ್ಪ, ನವಲಿ ಹಾಲಪ್ಪ, ಪಿ.ಗೋಣೆಪ್ಪ, ಬಿ.ಹಾಲಪ್ಪ, ಕೆ.ಕೋಟೆಪ್ಪ, ಬಿ ಸುಭಾಷ್, ಮರಿಗೋಣೆಪ್ಪ, ರವೀಂದ್ರ ಕೆ., ಕೆ. ದೇವೇಂದ್ರಪ್ಪ, ಎ.ಕೆ.ದುರುಗಪ್ಪ, ಪರುಸಪ್ಪ, ಮಹಾಲಿಂಗಪ್ಪ ಎಂ., ಜಿ ಮಂಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net