

ಆನಂದ ಅಂಗಡಿ ಹುಬ್ಬಳ್ಳಿ
ಇನ್ನೂ ಕೆಲವೇ ತಿಂಗಳಲ್ಲಿ ವಿದ್ಯುತ್ ಉಳಿತಾಯದ ಹೊಸ ಆಯಾಮ ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಆರಂಭಗೊಳ್ಳುತ್ತಿದೆ.
ಬೀದಿ ದೀಪ ಹತ್ತುತ್ತಿಲ್ಲ, ಬೀದಿ ದೀಪಗಳ ನಿರ್ವಹಣೆ ಕಷ್ಟ, ಕೋಟ್ಯಾನುಗಟ್ಟಲೇ ವಿದ್ಯುತ್ ಶುಲ್ಕ ಪಾವತಿಸಬೇಕು ಎಂಬೆಲ್ಲ ಕಿರಿಕಿರಿಗಳು ಇದರಿಂದ ತಪ್ಪಲಿವೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಜನರು ಪಾವತಿಸುವ ತೆರಿಗೆ ಹಣ ಅನಗತ್ಯ ವೆಚ್ಚ ಆಗುವುದಕ್ಕೆ ಇದರಿಂದ ಕಡಿವಾಣ ಬೀಳಲಿದೆ.
ಹೌದು, ಅವಳಿ ನಗರದ ಈಗಿನ ಬೀದಿ ದೀಪಗಳನ್ನು ತೆಗೆದು ಎಲ್ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕೆನ್ನುವ ಬಹಳ ದಿನಗಳ ಆಶಯ ಇನ್ನೂ ಕೆಲವೇ ತಿಂಗಳಲ್ಲಿ ಈಡೇರಲಿದೆ.
ಪಾಲಿಕೆ ವ್ಯಾಪ್ತಿಯ ಬೀದಿದೀಪಗಳ ಸರ್ವೇ ನಡೆಸಿ, ಎಲ್ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ, ಸರ್ಕಾರದಿಂದ ಅನುಮೋದನೆ ದೊರೆತಿದೆ.
ದೇಶದ 12 ಮಹಾನಗರಗಳಲ್ಲಿ ಈಗಾಗಲೇ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಮೈಸೂರಿನಲ್ಲಿಯೂ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಎಲ್ಇಡಿ ಬೀದಿ ದೀಪಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಎಲ್ಇಡಿ ಬೀದಿ ದೀಪಗಳ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಹುಬ್ಬಳ್ಳಿ & ಧಾರವಾಡ ಮಹಾನಗರ ಪಾಲಿಕೆಗೂ ಸರ್ಕಾರ ಎಲ್ಇಡಿ ಬೀದಿ ದೀಪಗಳ ಅಳವಡಿಕೆಗೆ ಅನುಮೋದನೆ ನೀಡಿದ್ದರಿಂದ ಈ ಪ್ರಕ್ರಿಯೆ ಟೆಂಡರ್ ಹಂತದಲ್ಲಿ ಇದೆ. 2023ರ ಮಾರ್ಚ್&ಏಪ್ರಿಲ್ನಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲ ಬೀದಿಗಳಲ್ಲಿ ಎಲ್ಇಡಿ ವಿದ್ಯುತ್ ದೀಪಗಳು ಬೆಳಗಲಿವೆ.
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಅಂದಾಜು 55 ಸಾವಿರ ಬೀದಿ ದೀಪಗಳಿದ್ದು, ಹೊಸ ಪ್ರಕ್ರಿಯೆಯಿಂದ ಇವುಗಳ ಸಂಖ್ಯೆ 75 ಸಾವಿರಕ್ಕೆ ಏರಲಿದೆ.
ಮಹಾನಗರ ಪಾಲಿಕೆ ಪ್ರತಿ ವರ್ಷ 21 ಕೋಟಿ ರೂ. ಬೀದಿ ದೀಪಗಳ ವಿದ್ಯುತ್ ಶುಲ್ಕ ಭರಿಸುತ್ತಿದೆ. ಇದರೊಂದಿಗೆ 7 ರಿಂದ 8 ಕೋಟಿ ರೂ.ಯನ್ನು ಇವುಗಳ ನಿರ್ವಹಣೆಗೆ ವ್ಯಯಿಸುತ್ತಿದೆ. ವಿದ್ಯುತ್ ಉಳಿತಾಯದ ಹೊಸ ಆಯಾಮದಡಿ ಗುತ್ತಿಗೆ ಪಡೆಯುವ ಕಂಪನಿಯೇ 7 ವರ್ಷಗಳವರೆಗೆ ಬೀದಿ ದೀಪಗಳ ನಿರ್ವಹಣೆ ಮಾಡಲಿದೆ. ಇದರಿಂದಾಗಿ ನಿರ್ವಹಣೆಗಾಗಿ ಪಾವತಿಸುತ್ತಿದ್ದ 7 ರಿಂದ 8 ಕೋಟಿ ರೂ. ಹಣ 7 ವರ್ಷಗಳವರೆಗಾದರೂ ಪಾಲಿಕೆಗೆ ಉಳಿತಾಯವಾಗಲಿದೆ.
ಮಹತ್ವದ ವಿಷಯವೆಂದರೆ, ಗುತ್ತಿಗೆ ಪಡೆಯುವ ಕಂಪನಿ ಮಾಡುವ ವಿದ್ಯುತ್ ಉಳಿತಾಯದ ಆಧಾರದ ಮೇಲೆ ಆ ಕಂಪನಿಗೆ ಪಾಲಿಕೆ ಹಣ ಪಾವತಿಸಲಿದೆ. ಒಂದು ವೇಳೆ ಕಂಪನಿ ಯಾವುದೇ ರೀತಿಯ ವಿದ್ಯುತ್ ಉಳಿತಾಯ ಮಾಡದೇ ಹೋದರೆ ಅದಕ್ಕೆ ಯಾವುದೇ ರೀತಿಯ ಹಣ ಪಾವತಿಸುವುದಿಲ್ಲ. ಇದರೊಂದಿಗೆ ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಎಲ್ಲ ರೀತಿಯ ರ್ಖಚನ್ನು ಗುತ್ತಿಗೆ ಪಡೆಯುವ ಕಂಪನಿಯೇ ವಹಿಸಬೇಕು.
ಬಾಕ್ಸ್
ಕೋಟ್
ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿಗಳಲ್ಲಿ ಇನ್ನು ಮುಂದೆ ಎಲ್ಇಡಿ ವಿದ್ಯುತ್ ದೀಪಗಳು ಬೆಳಗಲಿವೆ. ಇದರಿಂದ ಪಾಲಿಕೆಗೆ ಆಥಿರ್ಕ ಹೊರೆ ತಪ್ಪಲಿದ್ದು, ಜನರಿಗೆ ಆಗುತ್ತಿದ್ದ ಕಿರಿಕಿರಿಯೂ ದೂರವಾಗಲಿದೆ.
-ಈರೇಶ ಅಂಚಟಗೇರಿ, ಮೇಯರ್