ಮಹಾದೇವ ದೇವರ ಭವ್ಯ ರಥೋತ್ಸವ

1Npn1
Published on

ನಿಪ್ಪಾಣಿ: ಮಹಾಶಿವರಾತ್ರಿ ಪ್ರಯುಕ್ತ ನಗರದ ಮಹಾದೇವ ಗಲ್ಲಿಯಲ್ಲಿರುವ ಶ್ರೀ ಮಹಾದೇವ ದೇವಸ್ಥಾನದ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು. ಮಹಾದೇವ ಮಂದಿರದಿಂದ ಪ್ರಾರಂಭವಾದ ರಥೋತ್ಸವವು ನಗರದ ಪ್ರಮುಖ ಬಿದಿಗಳಿಂದ ಸಾಗಿ ರಾತ್ರಿ ಮಂದಿರಕ್ಕೆ ಮರಳಿತು.

ಮೆರವಣಿಗೆಯಲ್ಲಿ ಜಮಖಂಡಿ, ಬೇಡಕಿಹಾಳ ಬ್ಯಾಂಡ್, ಕರೋಶಿ, ಧುಳಗನವಾಡಿ,ಕೋಥಳಿ, ಕರಡಿ ಡೋಲ, ಶ್ರೀ ಹನುಮಾನ ಸಂಭಳಾ ವಾದ್ಯ ಹಾಗೂ ಆನೆ, ಕುದುರೆ ಮುಂತಾದವುಗಳು ಭಾಗವಹಿಸಿದ್ದವು. ಉಜ್ಜಯಿನಿ ಮಹಾಕಾಳೆಶ್ವರ ದೇವಸ್ಥಾನದ ಶ್ರೀ ಭಸ್ಮ ರಾಮಯ್ಯ ಭಕ್ತ ಮಂಡಳಿಯ ವಾದ್ಯಗಾರರ ಡಮರು ನೃತ್ಯ ಕಣ್ಮನ ಸೆಳೆಯಿತು.

ಮಾ.೪ರಂದು ಮಧ್ಯಾಹ್ನ ೧೨ರಿಂದ ಮಹಾಪ್ರಸಾದ ಆಯೋಜಿಸಲಾಗಿದೆ ಜಾತ್ರಾ ಸಮಿತಿ ಅಧ್ಯಕ್ಷ ಸುನೀಲ ಪಾಟೀಲ ತಿಳಿಸಿದ್ದಾರೆ. ಚಂದ್ರಕಾಂತ ತಾರಳೆ, ಚಂದ್ರಕಾಂತ ಕೋಠಿವಾಲೆ, ಸಂಜಯ ಮೊಳವಾಡೆ, ಸಮೀರ ಬಾಗೇವಾಡಿ, ಅಮರ ಬಾಗೇವಾಡಿ, ರವಿ ಕೋಠಿವಾಲೆ, ಮಲ್ಲಿಕಾರ್ಜುನ ಗಡಕರಿ, ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸಾವಿರು ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net