ಮಹಾದಾಯಿ ಜಾರಿಗೆ ಹೋರಾಟ ಮಾಡಲಿ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬಿಜೆಪಿಯವರು ವಕ್ಪ್ ವಿಷಯದಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರು ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ಮಾಡಲಿ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ವಕ್ಪ್ ವಿಷಯವನ್ನು ಕೈಗೆತ್ತಿಕೊಂಡರು. ಇವರು ಅಧಿಕಾರದಲ್ಲಿ ಇದ್ದಾಗಲೇ ವಕ್ಪ್ ವಿಷಯವಾಗಿ ಹೆಚ್ಚು ನೋಟಿಸ್ ಜಾರಿಯಾಗಿತ್ತು. ಹಿಂದುತ್ವ ಅಜೆಂಡಾದಿಂದ ಮತ ಬರುತ್ತದೆ ಎಂಬುವುದನ್ನು ಬಿಜೆಪಿ ಬಿಟ್ಟು ಬಿಡಲಿ. ಆ ಕಾಲ ಮುಗಿದಿದೆ. ಜನರು ಬುದ್ಧಿವಂತರಾಗಿದ್ದಾರೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಕೊಡಿಸಲು ಬಿಜೆಪಿ ಸಂಸದರು ಪ್ರಯತ್ನ ಮಾಡಲಿ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದೂ ಸಮಾವೇಶ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಿಂದೂ ಅಲ್ಲವೇ?. ಯತ್ನಾಳ ತುಂಬಾ ಹತಾಶರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ ಶಾ ಅವರನ್ನು ಒಲಿಸಿಕೊಳ್ಳಲು ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯೇಂದ್ರ ಸಮಾವೇಶ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net