ಮಹಾತ್ಮರು ಸಮುದಾಯಕ್ಕೆ ಸೀಮಿತವಲ್ಲ

23-99
ಅಲಖನೂರ ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿದರು. ಬಸವಾನಂದ ಸ್ವಾಮೀಜಿ, ಟಿ.ಎಸ್.ವಂಟಗೂಡಿ, ಶಂಕರ ಪೂಜೇರಿ, ದೇವಪ್ಪ ಯಲ್ಲಟ್ಟಿ, ಯಲ್ಲಪ್ಪ ಶಿಂಗೆ, ವಾಮನ್ನ ಹಟ್ಟಿಮನಿ, ಲಕ್ಕಪ್ಪ ನಾಯಕ ಇತರರಿದ್ದರು.
Published on

ಕುಡಚಿ, ಬೆಳಗಾವಿ: ಸ್ವಾಭಿಮಾನ ಮತ್ತು ನಮ್ಮ ಹಕ್ಕಿಗೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಧ್ವನಿ ಎತ್ತುವ ಮೂಲಕ ಹೋರಾಟ ಮಾಡಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ತಾಲೂಕಿನ ಅಲಖನೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಸೇರಿ ಮಹಾಪುರುಷರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದರು. ಮಹನೀಯರ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ಇತಿಹಾಸ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಪ್ರತಿಯೊಂದು ಸಮುದಾಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಜತೆಗೆ ಸಮಾಜಮುಖಿ ಕಾರ್ಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಗಳು ನಡೆಯಬೇಕಿದೆ ಎಂದರು. ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ಮುಖಂಡ ಮಹೇಶ ತಮ್ಮಣವರ, ರಾಮಣ್ಣ ಗಸ್ತಿ, ಪ್ರಾಧ್ಯಾಪಕ ಟಿ.ಎಸ್.ವಂಟಗೂಡಿ, ಶಂಕರ ಪೂಜೇರಿ, ದೇವಪ್ಪ ಯಲ್ಲಟ್ಟಿ, ಯಲ್ಲಪ್ಪ ಶಿಂಗೆ, ವಾಮನ್ ಹಟ್ಟಿಮನಿ, ಲಕ್ಕಪ್ಪ ನಾಯಕ, ಜೈಕುಮಾರ ಸನದಿ, ಕುಮಾರ ಪಾಟೀಲ, ಶಿವಪ್ಪ ನಾಯಕ, ಸಿದ್ರಾಮ ನಾಯಕ, ಕಮಲಾಕರ ಪಾಟೀಲ, ಪ್ರಕಾಶ ಬಸ್ತವಾಡೆ, ಸಚಿನ ಪಾಟೀಲ, ಹೊನ್ನಪ್ಪ ನಾಯಕ, ಕುಮಾರ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net