ಮಹಾತ್ಮರ ಸಂದೇಶ ಪಾಲಿಸಲಿ

web3
ರಾಮದುರ್ಗ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಜಯಂತಿಯಲ್ಲಿ ನುಲಿಯ ಚಂದಯ್ಯ, ಬ್ರಹ್ಮರ್ಷಿ ನಾರಾಯಣಗುರು ಭಾವಚಿತ್ರಕ್ಕೆ ಶಾಸಕ ಅಶೋಕ ಪಟ್ಟಣ ಪೂಜೆ ಸಲ್ಲಿಸಿದರು. ಪ್ರಕಾಶ ಹೊಳೆಪ್ಪಗೋಳ, ಎಸ್.ಪಿ ಖಾತೆದಾರ ಇತರರಿದ್ದರು.
Published on

ರಾಮದುರ್ಗ: ಎಲ್ಲ ಮಹಾನ್ ವ್ಯಕ್ತಿಗಳ ಸಾಮಾಜಿಕ ಸಂದೇಶ ಒಂದೇ ಆಗಿದ್ದು, ಪರಸ್ಪರ ಸಹೋದರತೆಯಿಂದ ಬಾಳುವಂತೆ ತಿಳಿಸಿದ್ದಾರೆ. ಮಹಾನ್ ವ್ಯಕ್ತಿಗಳ ಆದರ್ಶ ಪಾಲನೆ ಮಾಡಿದಲ್ಲಿ ಮಾತ್ರ ಅವರ ಜನ್ಮ ದಿನಾಚರಣೆಗೆ ಬೆಲೆ ನೀಡಿದಂತಾಗುತ್ತದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ಗುರುವಾರ ಏರ್ಪಡಿಸಿದ್ದ ನುಲಿಯ ಚಂದಯ್ಯ ಹಾಗೂ ಬ್ರಹ್ಮರ್ಷಿ ನಾರಾಯಣಗುರು ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನುಲಿಯ ಚಂದಯ್ಯ ಹಾಗೂ ಬ್ರಹ್ಮರ್ಷಿ ನಾರಾಯಣಗುರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಗ್ರೇಡ್-2 ತಹಸೀಲ್ದಾರ್ ಎಸ್.ಪಿ. ಖಾತೆದಾರ ಇತರರಿದ್ದರು.

ಕೊಳವಿ ವರದಿ: ಸಮೀಪದ ಮಮದಾಪುರ ಗ್ರಾಮದ ಶ್ರೀ ನುಲಿಯ ಚಂದಯ್ಯ ಯುವಕ ಸಂಘದವರು ಗುರುವಾರ ಶರಣ ನುಲಿಯ ಚಂದಯ್ಯ ಅವರ 916ನೇ ಜಯಂತ್ಯುತ್ಸವ ಆಚರಿಸಿದರು. ಗ್ರಾಮದ ಭಜಂತ್ರಿ ಗಲ್ಲಿಯಲ್ಲಿ ಶರಣ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಮುಖ್ಯ ಅತಿಥಿ ಸುರೇಶ ಸನದಿ ಮತ್ತು ಕೆಂಪಣ್ಣ ಮೈಲನ್ನವರ ಪೂಜೆ ಸಲ್ಲಿಸಿದರು. ಕೆಂಚಪ್ಪ ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು.

ಯಲ್ಲಪ್ಪ ಭಜಂತ್ರಿ, ಸೋಮವ್ವ ಭಜಂತ್ರಿ, ಅಶೋಕ ಭಜಂತ್ರಿ, ಹನುಮಂತ ಭಜಂತ್ರಿ, ಜನಾರ್ದನ ಭಜಂತ್ರಿ, ಪರಶುರಾಮ ಭಜಂತ್ರಿ, ಕರೆಪ್ಪ ಭಜಂತ್ರಿ, ಶ್ರೀ ನೂಲಿಯ ಚಂದಯ್ಯ ಯುವಕ ಸಂಘದ ಸರ್ವ ಸದಸ್ಯರು ಇದ್ದರು. ನಂತರ ಶರಣ ಚಂದಯ್ಯನವರ ಭಾವಚಿತ್ರವನ್ನು ಅಲಂಕರಿಸಿ ವಾಹನದ ಮೇಲೆ ಗ್ರಾಮದ ವಿವಿಧ ಕಡೆ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net