

ಅಥಣಿ, ಬೆಳಗಾವಿ: ಮಹಾತ್ಮರ ಮತ್ತು ತಪಸ್ವಿಗಳ ಜಯಂತ್ಯುತ್ಸವ ಆಚರಿಸುವ ಮೂಲಕ ನಮ್ಮ ಮಾನಸಿಕ ನೆಮ್ಮದಿ ವೃದ್ಧಿಸಿಕೊಳ್ಳಬೇಕು ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಘೋಂಗಡಿ ಕಾಂಪ್ಲೆಕ್ಸ್‌ನಲ್ಲಿ ಈಚೆಗೆ ಆಯೋಜಿಸಿದ್ದ ಲಿಂ. ಚನ್ನಬಸವ ಸ್ವಾಮೀಜಿಯ 75ನೇ ಜಯತ್ಯುಂತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರು ಸದಾ ತಮ್ಮ ಬದುಕನ್ನು ಸಮಾಜದ ಉದ್ಧಾರಕ್ಕೆ ಅರ್ಪಿಸಿದವರು ಎಂದು ತಿಳಿಸಿದರು.
ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಚನ್ನಬಸವ ಸ್ವಾಮೀಜಿ ತ್ರಿಕಾಲ ಲಿಂಗಪೂಜಾ ನಿಷ್ಠರಾಗಿ ಮಠಕ್ಕೆ ಬರುವ ಭಕ್ತರಿಗೆ ಅರಿವು, ಅನ್ನ, ಆಶ್ರಯ ನೀಡಿದ ಮಹಾತ್ಮರು ಎಂದರು.
ಸರ್ಪಭೂಷಣ ಹಿರೇಮಠ ದಂಪತಿಯನ್ನು ಸತ್ಕರಿಸಲಾಯಿತು. ಕಾಡಯ್ಯ ಸ್ವಾಮೀಜಿ, ರಾಮನಗೌಡ ಪಾಟೀಲ, ಎಂ.ಸಿ.ಗಂಗಾಧರ, ಸಿ.ಎ.ಇಟ್ನಾಳಮಠ, ಪ್ರಿಯಂವದಾ ಹುಲಗಬಾಳಿ ಮಾತನಾಡಿದರು. ನಿತ್ಯಾನಂದ ಚರಂತಿಮಠ, ಆನಂದ ಲಗಳಿ, ಸಂಗಯ್ಯ ಹಿರೇಮಠ, ವಿಜಯ ನೇಮಗೌಡ, ಶಶಿಕಲಾ ಹರ್ತಿ, ಗೀತಾ ತೊರಿ ಇತರರಿದ್ದರು.