ಮಹಾತ್ಮರ ಪುತ್ಥಳಿ ಬಳಿ ಸಿಸಿ ಕ್ಯಾಮರಾ ಅಳವಡಿಸಿ

PH 06
Published on

ಚಿಂಚೋಳಿ: ಜಿಲ್ಲೆಯಲ್ಲಿ ಮಹಾತ್ಮರ ಪುತ್ಥಳಿ ಹಾಗೂ ಭಾವಚಿತ್ರಗಳಿಗೆ ನಿರಂತರ ಅವಮಾನ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ನರನಾಳದ ಶ್ರೀ ಶಿವಕುಮಾರ ಶಿವಾಚಾರ್ಯರು ದೂರಿದರು.

ಚಿತ್ತಾಪುರ ತಾಲೂಕಿನ ಹಲಕರ್ಟಿಯಲ್ಲಿ ಶ್ರೀ ಬಸವೇಶ್ವರ ಭಾಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಬಸವ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘಟನೆ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಕೂಡಲೇ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಎಲ್ಲ ಮಹಾನ್ ನಾಯಕ ಭಾವಚಿತ್ರ ಹಾಗೂ ಪುತ್ಥಳಿಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ಗೌತಮ ಪಾಟೀಲ್, ಮುಖಂಡರು ಶಶಿಧರ ಸೂಗೂರ, ಚಿತ್ರಶೇಖರ ಪಾಟೀಲ್, ಅಬ್ದುಲ್ ಬಾಸೀದ್, ಮಾರುತಿ ಗಂಜಗೇರಾ, ನಂದಿಕುಮಾರ ಪಾಟೀಲ್, ಶರಣು ಪಾಟೀಲ್ ಮಾತನಾಡಿದರು. ಪ್ರಮುಖರಾದ ಚಿತ್ರಶೇಖರ ಪಾಟೀಲ್, ಸುರೇಶ ದೇಶಪಾಂಡೆ, ಜಗದೀಶ ದೇಸಾಯಿ, ಸುಭಾಶಚಂದ್ರ ಯಂಪಳ್ಳಿ, ಭೀಮಶೆಟ್ಟಿ ಜಾಬಶೆಟ್ಟಿ, ಜಗದೇವಿ ಹಂಕ್ಯಾಳ, ಶಕುಂತಲಾ ಹುಲಿ, ಜಗನ್ನಾಥ ಇದಲಾಯಿ, ಸೂರ್ಯಕಾಂತ ಹುಲಿ, ಆನಂದ ಹಿತ್ತಲ್, ಸಂತೋಷ ಗಡಂತಿ, ನಾಗರಾಜ ಮಲಕೂಡ, ಸಂಜುಕುಮಾರ ಪಾಟೀಲ್, ಡಾ.ಜ್ಯೋತಿರ್ಲಿಂಗ ಸೂಗೂರ, ಗೌರಿಶಂಕರ ಉಪ್ಪಿನ್, ಬಸವರಾಜ ಕೊಡಂಬುಲ್, ವಿಜಯಕುಮಾರ ಗೌನಳ್ಳಿ, ಶ್ರೀನಿವಾಸ ಭಂಡಿ, ಕೆ.ಎಂ.ಬಾರಿ, ಅಬ್ದುಲ್ ಬಾಸೀದ್, ಮಾರುತಿ ಗಂಜಗೇರಾ, ಶಂಕರ ಶಿವಪುರಿ, ಜಗದೀಶ ದೇಶಪಾಂಡೆ, ರಾಜು ಪವಾರ್, ಪ್ರೇಮಸಿಂಗ್ ಜಾಧವ್, ಹಣಮಂತ ಪೂಜಾರಿ, ಯಲ್ಲಾಲಿಂಗ ದಂಡಿನ್, ಅಶೋಕ ಚವ್ಹಾಣ್, ಸುನೀಲ ಸಲಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net