

ಚಿತ್ರದುರ್ಗ: ಮಹಾತ್ಮ ಗಾಂಧೀಜಿ ತ್ಯಾಗದ ಪ್ರತಿ ರೂಪ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಸೀಬಾರದ ಅವರ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ,ಲಾಲ್ಬಹುದ್ದೂರ್‌ಶಾಸ್ತ್ರಿ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು,ಶ್ರೀಮಂತ ಕುಟುಂಬ ಗಾಂಧಿ,ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದದ ನೋವುಂಡು ಹೋರಾಟಗಾರನಾಗಿ ಪರಿವರ್ತನೆಗೊಂಡರು.
ಆಂಗ್ಲರ ಹಿಡಿತದಿಂದ ಭಾರತವನ್ನು ಬಿಡುಗಡೆಗೊಳಿಸಲು ತಮ್ಮ ಬದುಕನ್ನು ಸಮರ್ಪಿಸಿದರು. ಉಪ್ಪಿಗೆ ಬ್ರಿಟಿಷರು ತೆರಿಗೆ ವಿಧಿಸಿದ ಸಂ ದರ್ಭ ಅದನ್ನು ವಿರೋಧಿಸಿ ಉಪ್ಪಿನ ದಂಡಯಾತ್ರೆ ಸೇರಿ ವಿವಿಧ ರೀತಿ ಹೋರಾಟ ನಡೆಸಿದ ಗಾಂಧೀಜಿಯ ಅಹಿಂಸಾ ಮಾರ್ಗ ಪ್ರಸ್ತು ತ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿದೆ.
ಸ್ವದೇಶಿ ಉತ್ಪನ್ನಗಳ ಬಳಸಿ ಎಂಬ ಗಾಂಧೀಜಿ ಅವರ ಕರೆ ದೇಶದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಉಂಟು ಮಾಡುವುದರೊಂದಿಗೆ ಜ ನರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹೆಚ್ಚಿಸಿತ್ತು. ತಮ್ಮ ದೂರದೃಷ್ಟಿ ಚಿಂತನೆ,ಭಾರತದ ಹಿತದೃಷ್ಟಿಯಿಂದ ಜವಹರಲಾಲ್ ನೆಹರು ಅವರನ್ನು ಪ್ರಥಮ ಪ್ರಧಾನಿಯನ್ನಾಗಿ ಮಾಡುವ ಮೂಲಕ ಗಾಂಧಿ ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅವರ ಆಶಯದಂತೆ ದೇಶವನ್ನು ಕೃಷಿ,ಶಿಕ್ಷಣ,ವಿಜ್ಞಾನ ಕ್ಷೇತ್ರದಲ್ಲಿ ನೆಹರು ಅದ್ವಿತೀಯ ಸಾಧನೆ ಮಾಡಿದರು. ಪಂಚವಾರ್ಷಿಕ ಯೋಜನೆಗಳ ಮೂಲಕ ಬರಿದಾಗಿದ್ದ ಭಾರತವನ್ನು ಮರು ನಿರ್ಮಾಣ ಮಾಡಿದ್ದಾರೆ ಎಂದರು.
ಮದ್ದೇರು ಗ್ರಾಪಂ ಮಾಜಿ ಅಧ್ಯಕ್ಷೆ ಗಂಗಮ್ಮ,ಬ್ಲಾಕ್ ಕಾಂಗ್ರೆಸ್‌ಉಪಾಧ್ಯಕ್ಷ ನಿರಂಜನ್,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದುರುಗೇಶ್ ಪೂಜಾರಿ,ಮುಖಂಡರಾದ ವಿಜಯಕುಮಾರ್,ಶಿವಣ್ಣ,ಬಸವರಾಜಪ್ಪ,ಕಿರಣ್,ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು.