

ಯಾದಗಿರಿ: ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಬಲಿಷ್ಠತೆ ಸಾಧ್ಯ ಎಂಬ ಕನಸು ಮಹಾತ್ಮಾ ಗಾಂಧೀಜಿ ಕಂಡಿದ್ದರು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.
ಜಿ¯್ಲÁಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತಿç ಜಯಂತಿ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಸತ್ಯ, ಅಂಹಿಸೆ, ಶಾಂತಿ ಗಾಂಧೀಜಿ ಅವರ ಮೂಲ ಮಂತ್ರಗಳಾಗಿದ್ದವು. ಅಲ್ಲದೆ ಮಹಾತ್ಮಾ ಗಾಂಧಿ ಹೆಸರೇ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅಲ್ಲದೆ ಅವರ ತತ್ವಾದರ್ಶಗಳು ಯುವ ಜನಾಂಗಕ್ಕೆ ಮಾದರಿಯಾಗಿದ್ದು ಅವುಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸತ್ಯ, ಅಹಿಂಸೆಯ ಪ್ರತಿಪಾದಕರಾಗಿದ್ದ ಗಾಂಧೀಜಿ, ದೇಶದ ಸ್ವಾತಂತ್ರö್ಯಕ್ಕಾಗಿ ಮಾಡಿದ ಹೋರಾಟ ಇಂದಿನ ಪೀಳಿಗೆಗೆ ಆದರ್ಶ. ದೇಶದಿಂದ ವಿದೇಶದವರೆಗೂ ಬಾಪೂಜಿ ಅವರ ಖ್ಯಾತಿ ಇದೆ. ದಕ್ಷಿಣ ಆಫ್ರಿಕಾದ ನೆಲ್ಸ ನ್ ಮಂಡೇಲಾರ ಹೋರಾಟವೂ ಸಹ ಗಾಂಧೀಜಿಯ ತತ್ವಗಳನ್ನೇ ಆಧರಿಸಿವೆ ಎಂದರು.
ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ, ಸರ್ವಧರ್ಮ ಪ್ರಾರ್ಥನೆ ನಡೆಯಿತು. ಜೈನ ಸಮುದಾಯದಿಂದ ಬಾಬು ದೋಖಾ, ಹಿಂದು ಸಮುದಾಯದಿಂದ ಹಿರೇಮಠ, ಮುಸ್ಲಿಂ ಸಮುದಾಯದಿಂದ ಮೌಲಾನಾ ಚಾಂದ ಪಾಷಾ, ಕ್ರಿಶ್ಚಿಯನ್ ಸಮುದಾಯದಿಂದ ಫಾದರ್ ಆನಂದ್ ಪ್ರಾರ್ಥಿಸಿದರು. ಚಂದ್ರಶೇಖರ ಗೋಗಿ ಮತ್ತು ಸಂಗಡಿಗರು ಗಾಂಧಿ ಕುರಿತ ಗೀತೆಗಳು ಹಾಡಿದರು.
ಜಿ¯್ಲÁ ಪೋಲಿಸ್ ವರಿಷ್ಠಾಧಿಕಾರಿ ಸಂಗೀತಾ.ಜಿ, ಜಿಪಂ ಸಿಇಒ ಲವೀಶ್ ಓರ್ಡಿಯಾ, ನಗರಯೋಜನಾ ಪ್ರಾಧಿಕಾರದ ಅಧ್ಯP್ಷÀ ವಿನಾಯಕ ಪಾಟೀಲï, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ್ ಸ್ವಾಗತಿಸಿದರು. ದುರ್ಗಪ್ಪ ಪೂಜಾರಿ ವಂದಿಸಿದರು.
ಈ ವೇಳೆ ಬಾಪೂಜಿ ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ಶಾಲಾ, ಕಾಲೇಜು, ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ನಗದು ವಿತರಿಸಲಾಯಿತು.