

ಕಲಬುರಗಿ: ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ನಗರದಿಂದ ಹೊರಟ ಯಾತ್ರಾರ್ಥಿಗಳ ಬಸ್‌ಗಳಿಗೆ ಶುಕ್ರವಾರ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಒಪ್ಪಂದದ ಮೇರೆಗೆ ಮಹಾ ಕುಂಭಮೇಳಕ್ಕೆ ನಗರದ ರಾಘವೇಂದ್ರ ಕಾಲನಿಯ ಮತ್ತು ರಾಜಾಪುರ ಕಾಲನಿಯಿಂದ ಹೊರಟ ಒಟ್ಟು ಮೂರು ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಪೂಜೆ ಸಲ್ಲಿಸಿ, ಶುಭ ಕೋರಿದರು.
ಕುಂಭಮೇಳಕ್ಕೆ ಬಸ್ ಸೌಲಭ್ಯ: ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮಾತನಾಡಿ, ಮಹಾಕುಂಭ ಮೇಳಕ್ಕೆ ಹೊರಡುವ ಯಾತ್ರಾರ್ಥಿಗಳ ಅನುಕೂಲಕ್ಕೆ ಕೆಕೆಆರ್‌ಟಿಸಿ ಸಂಸ್ಥೆಯಿAದ ಅಮೋಘವರ್ಷ ನಾನ್ ಎಸಿ ಸ್ಲೀಪರ್ ಮತ್ತು ವೇಗದೂತ ಸಾರಿಗೆ ಬಸ್ ಒಪ್ಪಂದದ ಮೇರೆಗೆ ಪಡೆಯಲು ಸೌಲಭ್ಯ ಕಲ್ಪಿಸಿದೆ ಎಂದರು.
೨೯ ಆಸನದ ಅಮೋಘ ವರ್ಷ ನಾನ್ ಎ.ಸಿ. ಸ್ಲೀಪರ್ ಒಪ್ಪಂದಕ್ಕೆ ೪.೧೦ ಲಕ್ಷ ರೂ. ವೆಚ್ಚವಾಗಲಿದೆ. ಪ್ರತಿ ಪ್ರಯಾಣಿಕರು ೧೫,೦೦೦ ರೂ. ಭರಿಸಬೇಕಾಗುತ್ತದೆ. ೪೯ ಆಸನ ಸಂಖ್ಯೆಯ ವೇಗದೂತ ಸಾರಿಗೆ ಬಸ್ ಒಪ್ಪಂದಕ್ಕೆ ೨.೮೫ ಲಕ್ಷ ರೂ. ವೆಚ್ಚವಾಗಲಿದೆ. ತಲಾ ಪ್ರಯಾಣಿಕರು ೬,೦೦೦ ರೂ. ಪಾವತಿಸಬೇಕಾಗುತ್ತದೆ ಎಂದರು.
ಸAಪರ್ಕಿಸಿ: ವಿಭಾಗೀಯ ಸಾರಿಗೆ ಅಧಿಕಾರಿ (೭೭೬೦೯೯೨೧೦೧), ಕಲಬುರಗಿ ಘಟಕ-೧(೭೭೬೦೯೯೨೧೧೩), ವಿಭಾಗ ೨ (೭೭೬೦೯೮೪೦೮೬), ಯಾದಗಿರಿ (೭೭೬೦೯೯೨೪೫೨), ಬೀದರ್ (೭೭೬೦೯೯೨೨೦೨), ರಾಯಚೂರು (೭೭೬೦೯೯೨೩೫೨), ಕೊಪ್ಪಳ (೭೭೬೦೯೯೨೪೫೨), ಹೊಸಪೇಟೆ (೭೭೬೦೯೯೨೩೦೨), ಬಳ್ಳಾರಿ (೭೭೬೦೯೯೨೧೫೨), ವಿಜಯಪುರ (೭೭೬೦೯೯೨೨೫೨) ಹಾಗೂ ಕೇಂದ್ರ ಕಚೇರಿ (೭೭೬೦೯೯೨೦೨೪)ಯನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಸಂಸ್ಥೆ ಮುಖ್ಯ ಸಂಚಾರಿ ಅಧಿಕಾರಿ ಸಂತೋಷಕುಮಾರ, ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ ಇತರರಿದ್ದರು