ಮಹಾಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ

VideoCapture_20230717-163828
ಶ್ರೀರಂಗಪಟ್ಟಣ ತಾಲೂಕಿನ ಮಹಾಕಾಳಿ ದೇವಾಲಯದಲ್ಲಿ ಭೀಮನ ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.
Published on

ಶ್ರೀರಂಗಪಟ್ಟಣ: ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್ ಬಳಿಯ ದೇವಾಲಯದಲ್ಲಿ ಭೀಮನ ಅಮವಾಸ್ಯೆ ಪ್ರಯುಕ್ತ ತಾಲೂಕಿನ ಮಹಾಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ಮಹಾಕಾಳಿ ದೇವಿಗೆ ಪಂಚಾಮೃತ ಅಭಿಷೇಕ, ದುರ್ಗಾಸಪ್ತಶತಿ ಪಾರಾಯಣ, ಸಹಸ್ರನಾಮ ಪಠಿಸಿ ವಿವಿಧ ಹೂವುಗಳಿಂದ ವಿಶೇಷವಾಗಿ ಅಲಂಕರಿಸಿ ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು. ತಂಡೋಪ ತಂಡವಾಗಿ ಆಗಮಿಸುತ್ತಿದ್ದ ಸಹಸ್ರಾರು ಸಂಖ್ಯೆಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಕಾಳಿದೇವಿಯ ಆರಾಧಕ ಗುರುದೇವ ನೇತೃತ್ವದಲ್ಲಿ ಶಕ್ತಿದೇವಿ ಮಹಾಕಾಳಿಗೆ ಪ್ರಾಂಗಣದಲ್ಲಿ ಪ್ರತ್ಯಂಗೀರ ಹೋಮ ನಡೆಸಲಾಯಿತು.
ವಿಶೇಷವೆಂಬಂತೆ ದೇವಾಲಯಕ್ಕೆ ಆಗಮಿಸಿದ ದಂಪತಿ ದೇವರ ದರ್ಶನ ಪಡೆದರು. ನಂತರ ದೇವಾಲಯದಲ್ಲೇ ಸತಿ, ತಮ್ಮ ಪತಿಗೆ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು.

ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ವಿತರಣೆ ಮಾಡಲಾಯಿತು. ತಾಲೂಕಿನ ಆರತಿಉಕ್ಕಡದ ಅಹಲ್ಯದೇವಿ ಸನ್ನಿಧಿಯಲ್ಲೂ ಭೀಮನ ಅಮವಾಸ್ಯೆ ಪ್ರಯುಕ್ತ ಸಾವಿರಾರು ಭಕ್ತರು ಆಗಮಿಸಿ ಶಕ್ತಿ ದೇವಿಯ ದರ್ಶನ ಪಡೆದರು. ಪಟ್ಟಣ ಸಮೀಪದ ಗಂಜಾಂನ ಶಕ್ತಿ ದೇವತೆ ನಿಮಿಷಾಂಬ ದೇವಾಲಯದಲ್ಲೂ ಭಕ್ತರ ಸಂಖ್ಯೆ ತುಂಬಿ ತುಳುಕಿತು. ಸರತಿ ಸಾಲಿನಲ್ಲಿ ನಿಂತು ಅಪೂರ್ವ ಬೀಜಾಕ್ಷರ ಸಹಿತ ನಿಮಿಷಾಂಬೆಯ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net