ಮಹಾಂತಪ್ಪಗಳ ಸ್ಮರಣೋತ್ಸವ ಸಮಾರಂಭ

web 1
Published on

ಧಾರವಾಡ: ತ್ರಿವಿಧ ದಾಸೋಹ ಮೂರ್ತಿ ಶ್ರೀ ಮಹಾಂತಪ್ಪಗಳ 29ನೇ ಸ್ಮರಣೋತ್ಸವ ಸಮಾರಂಭವನ್ನು ಜೂ. 21ರಂದು ನಗರದ ಮುರುಘಾಮಠದಲ್ಲಿ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 9 ಗಂಟೆಗೆ ಶ್ರೀಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವವು ಮಠದ ಆವರಣದಲ್ಲಿ ನೆರವೇರಲಿದೆ. 10.30ಕ್ಕೆ ಸ್ಮರಣೋತ್ಸವ ಸಮಾರಂಭ ನಡೆಯಲಿದ್ದು, ಮುಂಡರಗಿ ಕೆಂಪಿನಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ, ನಿಡಸೋಸಿಮಠದ ಶ್ರೀ ನಿಜಲಿಂಗ ದೇವರು ಸಮ್ಮುಖ ವಹಿಸುವರು. ಡಾ. ಬಸವರಾಜ ಜಗಜಂಪಿ ಉಪನ್ಯಾಸ ನೀಡಲಿದ್ದು, ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆವಹಿಸುವರು.
ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎನ್.ಎಚ್.ಕೋನರಡ್ಡಿ, ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ವೀರಣ್ಣ ರಾಜೂರ ಅವರನ್ನು ಸನ್ಮಾನಿಸಲಾಗುವುದು. ಶ್ರೀ ಮೃತ್ಯುಂಜಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net