ಮಹಾಂತ ಶ್ರೀಗಳ ಆದರ್ಶ ಮಾದರಿ

1Athani3
Published on

ಅಥಣಿ: ಯುವ ಸಮೂಹ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಕಳವಳ ವ್ಯಕ್ತಪಡಿಸಿದರು.

ಸಮೀಪದ ಮಲಾಬಾದ ಗ್ರಾಮದಲ್ಲಿ ವಿಮೋಚನಾ ವಸತಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಳಕಲ್ಲದ ಲಿಂ.ಮಹಾಂತಪ್ಪಗಳ ಜಯಂತಿ, ವ್ಯಸನ ಮುಕ್ತ ದಿನಾಚರಣೆ ಹಾಗೂ ಮಹಾಂತ ಮಂದಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನರ ದುಶ್ಚಟಗಳನ್ನು ಬಿಡಿಸುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದ ಮಹಾಂತ ಸ್ವಾಮೀಜಿ ಆದರ್ಶ ನಮ್ಮೆಲ್ಲರಿಗೆ ಮಾದರಿ ಎಂದರು.

ಡಾ.ವಿ.ಎಸ್.ಮಾಳಿ ಮಾತನಾಡಿ, ಲಿಂ. ಮಹಾಂತಪ್ಪನವರು ಮಹಾಂತ ಜೋಳಿಗೆ ಮೂಲಕ ಜನರ ಬದುಕು ಹಸನುಗೊಳಿಸಿದ್ದಾರೆ. ಹೀಗಾಗಿ ಅವರ ಜನ್ಮದಿನವನ್ನು ಸರ್ಕಾರ ರಾಜ್ಯಾದ್ಯಂತ ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿದೆ ಎಂದು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಕೌಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ, ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು.

ಸಾಹಿತಿ ಡಾ.ಬಸವರಾಜ ಜಗಜಂಪಿ, ವೈದ್ಯರಾದ ಡಾ.ರಾಮ ಕುಲಕರ್ಣಿ, ಡಾ.ಸಂಜೀವ ಕುಲಕರ್ಣಿ, ಶಂಕರ ಕುಂಬಿ, ಡಾ.ಶಿವಕುಮಾರ ಕಲ್ಯಾಣಮಠ ಅವರಿಗೆ ಮಹಾಂತ ಮಂದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯರಾದ ಅಣ್ಣಪ್ಪ ಕುಳೊಳ್ಳಿ ಅವರನ್ನು ಸತ್ಕರಿಸಲಾಯಿತು. ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್.ಪಾಟೀಲ, ಮಂಜುನಾಥ ಪಾಟೀಲ, ಅರುಣ ಯಲಗುದ್ರಿ, ಎಲ್.ವಿ.ಕುಲಕರ್ಣಿ, ಎ.ಎಸ್.ಬೇರಡ, ಮಲ್ಲಿಕಾರ್ಜುನ ಕನಶೆಟ್ಟಿ, ಬಿ.ವಿ.ಅವಟಿ, ಐ.ಬಿ.ಪಾಟೀಲ, ಬಿ.ಎಲ್.ಪಾಟೀಲ, ಸೌಂದರ್ಯ ಕುಳೊಳ್ಳಿ, ಸಮೀಕ್ಷಾ ಸನದಿ, ಪೂಜಾ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net