ಮಹಾ ಅಧಿವೇಶನ ಕರಪತ್ರ ವಿತರಣೆ

Jagatik Lingayat Mahila Ghatak Prachar photo-2
Published on

ಬೀದರ್: ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು ನಗರದಲ್ಲಿ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಬಿರುಸಿನ ಪ್ರಚಾರ ನಡೆಸಿದರು.
ನಗರದ ವಿವಿಧ ಕಾಲೊನಿಗಳಲ್ಲಿ ಸಂಚರಿಸಿ, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಕರಪತ್ರ ವಿತರಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಸಭೆಗಳನ್ನು ನಡೆಸಿ, ಲಿಂಗಾಯತ ಮಹಾ ಅಧಿವೇಶನಕ್ಕೆ ಆಹ್ವಾನ ನೀಡಿದರು.
ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಚಂದ್ರಕಾಂತ ಮಿರ್ಚೆ ಮಾತನಾಡಿ, ಲಿಂಗಾಯತ ಧರ್ಮವು ಸ್ತ್ರೀಯರಿಗೆ ಸ್ವಾತಂತ್ರ್ಯ ಹಾಗೂ ಸಮಾನತೆ ಕೊಟ್ಟ ಧರ್ಮವಾಗಿದೆ ಎಂದು ಹೇಳಿದರು.
ಹಿಂದೆ ಸ್ತ್ರೀಯನ್ನು ಶೂದ್ರಳೆಂದು ಭಾವಿಸಲಾಗುತ್ತಿತ್ತು. 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ವರ್ಗ, ವರ್ಣ ಭೇದಗಳೊಂದಿಗೆ, ಲಿಂಗ ಭೇದವನ್ನೂ ಅಳಿಸಿ ಹಾಕಿದ್ದರು. ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಒದಗಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದ್ದರು ಎಂದು ನುಡಿದರು.
ಬಸವಕಲ್ಯಾಣದಲ್ಲಿ ಮಾ. 4 ಮತ್ತು 5 ರಂದು ಜರುಗಲಿರುವ ಮಹಾ ಅಧಿವೇಶನದಲ್ಲಿ ಎಲ್ಲ ಮಹಿಳೆಯರು ತಪ್ಪದೇ ಪಾಲ್ಗೊಳ್ಳಬೇಕು. ಅಧಿವೇಶನವನ್ನು ಐತಿಹಾಸಿಕಗೊಳಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಹಾಸಭಾ ಮಹಿಳಾ ಘಟಕದ ಪ್ರಮುಖರಾದ ಸುವರ್ಣಾ ಧನ್ನೂರ, ಸುವರ್ಣಾ ಚಿಮಕೋಡೆ, ಜಯದೇವಿ ಯದಲಾಪುರೆ, ನೀಲಮ್ಮ ರೂಗನ್, ಶಾಂತಾದೇವಿ ಬಿರಾದಾರ, ಪ್ರತಿಭಾ ಗಾದಗಿ, ನಿರ್ಮಲಾ ಕಲ್ಯಾಣಿ, ಲಲಿತಾ ಪಾಟೀಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net