

ಹಾಸನ: ಸಂಸ್ಕೃತದಲ್ಲಿ ರಾಮಾಯಣ ರಚಿಸಿರುವ ಮಹರ್ಷಿ ವಾಲ್ಮೀಕಿ ಅವರ ಮಾರ್ಗದರ್ಶನ ಅನುಸರಿಸಿ ನಡೆಯಬೇಕು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಅವರು ತಿಳಿಸಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಹಾಸನಾಂಬ ಕಲಾಭವನದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ರಾಮಾಯಣ ಕುರಿತು ತಿಳಿಸುವುರ ಮೂಲಕ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ತಿಳಿಹೇಳಬೇಕು ಎಂದರು.
ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮಾಮಾತನಾಡಿ, ಭರತ ಖಂಡದಲ್ಲಿ 4 ಯುಗಗಳನ್ನು ಕಾಣುತ್ತೇವೆ. ಸತ್ಯಯುಗ, ತೇತ್ರಯುಗ, ದ್ವಾಪರಯುಗ, ಕಲಿಯುಗ ಈ ನಾಡಿನಲ್ಲಿ ವಾಲ್ಮೀಕಿ ರಾಮಾಯಣ ಹತ್ತಿರದಿಂದ ನೋಡಿದಂತವರು ಸೀತೆಯ ವನವಾಸದಲ್ಲಿ ಲವಕುಶ ಜನನ ವಾಲ್ಮೀಕಿ ಅವರ ಆಶಯದಲ್ಲಿ ಜನನ ಆಗುತ್ತದೆ. ವಾಲ್ಮೀಕಿ ಕುಟಿಲತೆ ಇರುವ ಶ್ರೀರಾಮ ವಾಲ್ಮೀಕಿ ರಾಮಾಯಣ ಸಾಹಿತ್ಯಕ್ಕೆ ಸಂಗೀತಕ್ಕೆ ಕಲೆಗೆ ಸೇರಿರುತ್ತದೆ ಎಂದರು.
ರಾಮಾಯಣ ಆಗಿನ ಕಾಲದಲ್ಲಿ ನಡೆದಂತಹ ಸನ್ನಿವೇಶಗಳನ್ನು ಬಹಳ ಅಚ್ಚುಕಟ್ಟಾಗಿ 24000 ಶ್ಲೋಕಗಳ ಮೂಲಕ ಜನಸಾಮಾನ್ಯರಿಗೆ ಕೊಟ್ಟಂತಹ ರಾಮಾಯಣ ಎಂದಿಗೂ ಪ್ರಸ್ತುತ. ಪ್ರಜೆಗಳು ರಾಮ ರಾಜ್ಯದಲ್ಲಿ ಸುಭಿಕ್ಷವಾಗಿ ಇರಬೇಕು ಎಂದು ಬೃಹತ್ ಕಾವ್ಯವನ್ನು ರಚಿಸಿದ್ದಾರೆ. ಭರತ ಖಂಡದಲ್ಲಿ ರಾಮಾಯಣ, ಮಹಾಭಾರತ ಬೃಹತ್ ಕಾವ್ಯಗಳನ್ನು ಕಾಣಬಹುದು ಎಂದ ಅವರು ರಾಮನ ಆದರ್ಶ, ಸೀತೆಯ ಬದ್ಧತೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆಯ ಅಧ್ಯಕ್ಷ ಎಂ.ಚಂದ್ರೇಗೌಡ ಮಾತನಾಡಿ, ಡಕಾಯಿತನಾಗಿದ್ದ ರತ್ನಾಕರ ನಾರದ ಮುನಿಯ ಮಾತಿನಿಂದ ಪರಿವರ್ತನೆಗೊಂಡು ರಾಮಾಯಣವನ್ನು ರಚಿಸಿದವರು. ರಾಮ ಎನ್ನುವ ಎರಡು ಅಕ್ಷರದಿಂದ ಸಂಪೂರ್ಣವಾದ ರಾಮಾಯಣ ರಚಿಸಿದ್ದಾರೆ. 24000 ಪದ್ಯಗಳು ನೊಳಗೊಂಡ ರಾಮಾಯಣ ದರ್ಶನಂ ವನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ ಎಂದು ಹೇಳಿದರು.
ಸತ್ಯ, ನೀತಿ ಪ್ರೇಮ ಹಿರಿಯರಿಗೆ ಗೌರವ ಸಂಕೇತವಾಗಿ ರಾಮಾಯಣವನ್ನು ವೈಭವಿಕರಿಸಿ ಇಡೀ ಮನುಕುಲ ಜಗತ್ತು ಇರುವವರೆಗೂ ಶಾಶ್ವತವಾಗಿ ಉಳಿಯುವ ರೀತಿಯಲ್ಲಿ ರಾಮಾಯಣ ರಚಿಸಿರುವ ವಾಲ್ಮೀಕಿ ಅವರಿಗೆ ನಮನ ಸಲ್ಲಿಸಿದವರು.
ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿ ಟಿ.ಎಚ್.ಅಪ್ಪಾಜಿಗೌಡ ಮಾತನಾಡಿ, ವಾಲ್ಮೀಕಿಯರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಮೊಹಮ್ಮದ್ ಸುಜೀತಾ ,ಅಪರ ಜಿಲ್ಲಾಧಿಕಾರಿ ಕೆ. ಟಿ ಶಾಂತಲಾ, ಸ್ವಾತಂತ್ರ ಹೋರಾಟಗಾರ ಎಚ್.ಎಂ.ಶಿವಣ್ಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ದೂದ್‌ಪಿರ್ ಇತರರು ಇದ್ದರು.
ಮೆರವಣಿಗೆಗೆ ಚಾಲನೆ:
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆ ಶಾಸಕ ಎಚ್.ಪಿ.ಸ್ವರೂಪ ಪ್ರಕಾಶ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಜಿಲ್ಲಾಧಿಕಾರಿ ಸಿ ಸತ್ಯಭಾಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ,ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ದೂದ್‌ಪೀರ್ ಮತ್ತಿತರ ಅಧಿಕಾರಿಗಳು ಹಾಗೂ ವಿವಿಧ ಸಮುದಾಯದ ಮುಖಂಡರು ಹಾಜರಿದ್ದರು.
ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯು ಹಾಸನಾಂಬ ಕಲಾ ಭವನಕ್ಕೆ ತೆರಳಿತು.