ಮಹರ್ಷಿ ವಾಲ್ಮೀಕಿ ನಾಯಕರ ಸಂಘದಿಂದ ಪ್ರತಿಭಾ ಪುರಸ್ಕಾರ

IMG-20240830-WA0002
Published on


ಸಾಲಿಗ್ರಾಮ : ತಾಲೂಕು ಮಹರ್ಷಿ ವಾಲ್ಮೀಕಿ ನಾಯಕರ ಸಂಘದಿಂದ ಸಾಲಿಗ್ರಾಮ ಪಟ್ಟಣದ ನಾಯಕರ ಬೀದಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ, ಬೀಳ್ಕೊಡುಗೆ ಸಮಾರಂಭ ಹಾಗೂ ಸಂಘದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಟ್ನಾಳ್ ಶ್ರೀಧರನಾಯಕ್ ಮಾತನಾಡಿ, ಸಾಲಿಗ್ರಾಮ ಹೊಸ ತಾಲೂಕಾಗಿರುವುದರಿಂದ ಸಂಘವನ್ನು ಅಭಿವೃದ್ಧಿ ಮಾಡಲು ಸಾಕಷ್ಟು ಸವಾಲುಗಳಿವೆ. ಆದರೆ ನೂತನ ಆಡಳಿತ ಮಂಡಳಿಯ ಎಲ್ಲ ಸದಸ್ಯರು ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವುದರಿಂದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನಲ್ಲಿ ಪ್ರವಾಸ ಮಾಡಬೇಕು. ಸಮುದಾಯದ ಪ್ರತಿ ಕುಟುಂಬದವರನ್ನು ಸಂಪರ್ಕಿಸಿ ಸದಸ್ಯತ್ವ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಆಡಳಿತ ಮಂಡಳಿಯಲ್ಲಿದ್ದ ಸದಸ್ಯರು ನೂತನ ಪದಾಕಾರಿಗಳಿಗೆ ಸಹಕಾರ ನೀಡಬೇಕು. ಆ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು. ಸಂಘದ ಅಭಿವೃದ್ಧಿ ಒಬ್ಬರ ಕೆಲಸವಲ್ಲ. ಸಮಾಜದ ಕೆಲಸವಾಗಿರುವುದರಿಂದ ಎಲ್ಲರ ಜವಾಬ್ದಾರಿಯು ಇರುತ್ತದೆ. ಹಾಗಾಗಿ ಸಂಘದಿಂದ ಸಮಾಜದ ಅಭಿವೃದ್ಧಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎಲ್ಲರನ್ನು ಒಗ್ಗೂಡಿಸಿ ಒಗ್ಗಟ್ಟಿನ ಸಂದೇಶವನ್ನು ಸಾರಬೇಕು ಎಂದು ಕಿವಿಮಾತು ಹೇಳಿದರು.

ಪದವಿ ಕಾಲೇಜಿನ ಪ್ರಾಧ್ಯಾಪಕ ಅಕ್ಕಿಹೆಬ್ಬಾಳು ನರಸಿಂಹನಾಯಕ ಮಾತನಾಡಿ, ಸಮಾಜದ ಹಿರಿಯರು ಮತ್ತು ನೌಕರರು ಹಾಗೂ ಹಿಂದಿನ ಆಡಳಿತ ಮಂಡಳಿಯವರು ನೀಡುವ ಮಾರ್ಗದರ್ಶನಗಳನ್ನ ಪಡೆದು ಸಂಘದ ಅಭಿವೃದ್ಧಿಗೆ ಬೇಕಾಗುವ ಎಲ್ಲ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ತಾಲೂಕಿನಲ್ಲಿರುವ ನಾಯಕ ಸಮಾಜದ ಪ್ರತಿ ಗ್ರಾಮದಲ್ಲೂ ಸದಸತ್ವ ನೋಂದಣಿ ಮಾಡಲಾಗುವುದು ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಯತ್ನಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಭೇರ್ಯ ಸಿ.ಸಿ.ಮಹದೇವ್, ಕೆ.ಆರ್.ನಗರ ವಕೀಲ ಸುನೀಲ್, ಡೇರಿ ಉಪಾಧ್ಯಕ್ಷ ರಾಮನಾಯಕ, ಯಾ.ಚಂದ್ರನಾಯಕ, ಯಾ.ತಿಮ್ಮನಾಯಕ, ಸಂಘದ ಉಪಾಧ್ಯಕ್ಷ ವೆಂಕಟೇಶನಾಯಕ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಸಂತೋಷ್, ಭೈರೇಶ್, ಕುಮಾರ್, ಸ್ವಾಮಿನಾಯಕ, ಕೆ.ಇ.ಬಿ. ದೇವರಾಜ್, ಮದೇವ್, ಬೆಳ್ಳೂರು ದೇವರಾಜ್, ಮಲ್ಲಿಕಾರ್ಜುನ್, ಕಿಟ್ಟಣ್ಣ, ರಂಗಸ್ವಾಮಿ, ಶಿಕ್ಷಕ ಕುಮಾರ್, ಪುಟ್ಟಣ್ಣ, ಗಿರೀಶ್, ಹರೀಶ್, ಕೃಷ್ಣನಾಯಕ, ಚಲುವನಾಯಕ, ಬೈರಣ್ಣ, ಹನುಮಂತ್, ರಾಮನಾಯಕ, ಜಯಲಕ್ಷ್ಮೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net