

ಯಲಬುರ್ಗಾ: ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹನೀಯರ ಆದರ್ಶ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಹಾಗೂ ಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಢನಂಬಿಕೆ, ಜಾತೀಯತೆ ಮೊದಲಾದ ಅನಿಷ್ಟ ಆಚರಣೆಗಳ ವಿರುದ್ಧ ಕ್ರಾಂತಿ ನಡೆಸಿದ ಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದ್ರಯ್ಯ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಬೇಕು ಎಂದರು. ತಾಪಂ ಸಿಬ್ಬಂದಿ ಬಸವರಾಜ ಹಳ್ಳಿ, ಸತೀಶ ಹಟ್ಟಿ, ಶರಣಪ್ಪ ಇಂಡಿ, ಉಮೇಶ ಇತರರಿದ್ದರು.
ಬಂಡಿ: ತಾಲೂಕಿನ ಬಂಡಿ ಗ್ರಾಪಂ ಕಚೇರಿಯಲ್ಲಿ ನುಲಿಯ ಚಂದಯ್ಯ, ನಾರಾಯಣಗುರು ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ರತ್ನಮ್ಮ ಮಲ್ಲಪ್ಪ ವಣಗೇರಿ, ಉಪಾಧ್ಯಕ್ಷೆ ಕಳಕಮ್ಮ ಕಾಮಪ್ಪ ಹೊರಪೇಟಿ, ಸದಸ್ಯರಾದ ಕಳಕಪ್ಪ ದುಗಲದ, ಬಸಪ್ಪ ತೊಂಡಿಹಾಳ, ಯಮನೂರಪ್ಪ ಭಜಂತ್ರಿ, ಪಿಡಿಒ ಸರ್ವಮಂಗಳ, ಸಿಬ್ಬಂದಿ ಶಿವರಾಜ, ವೀರೇಶ, ಶರಣಪ್ಪ ಭದ್ರಗೌಡ್ರ, ಪ್ರಮುಖರಾದ ಶೇಖಪ್ಪ ಭಜಂತ್ರಿ, ಹನುಮಂತ ಭಜಂತ್ರಿ, ಸಂಗಪ್ಪ ಕೊತಬಾಳ, ಶ್ರೀಕಾಂತ, ಮಾರುತಿ, ಪ್ರಕಾಶ, ಪರಸಪ್ಪ ಇತರರಿದ್ದರು.