ಮಹನೀಯರ ತತ್ತಾ್ವದರ್ಶ ಅಳವಡಿಸಿಕೊಳ್ಳಿ

2-hvr-05
Published on

ಹಾವೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 151ನೇ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಪುಷ್ಪಾರ್ಪಣೆ ಮಾಡಿದರು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಂದನಾ ಭಾಸ್ಕರ ಹಾಗೂ ಸಂಗಡಿಗರು ಗಾಂಧೀಜಿಯವರಿಗೆ ಪ್ರಿಯವಾದ ಗೀತೆಗಳನ್ನು ಪ್ರಸ್ತುತಪಡಿಸಿದರು. ಶಿಕ್ಷಕ ಜಿ.ಎಚ್. ಭಟ್ ಅವರು ಭಗದ್ಗೀತೆ, ಪಿ. ಮೊಹಸ್ಸಿನ-ಕುರಾನ್ ಹಾಗೂ ಸಿಸ್ಟರ್ ರಿಜಿನಾ ಅವರು ಬೈಬಲ್ ಪಠಣ ಮಾಡಿದರು. ಎಸ್​ಪಿ ಕೆ.ಜಿ. ದೇವರಾಜ್, ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಪ ಶಶಿ, ತಹಸೀಲ್ದಾರ್ ಶಂಕರ ಜಿ.ಎಸ್., ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ನಗರಸಭೆ ಪೌರಾಯುಕ್ತ ಬಸವರಾಜ ಜಿದ್ದಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಬಿಇಒ ಎಂ.ಎಚ್. ಪಾಟೀಲ, ಇಒ ಬಸವರಾಜ ಡಿ.ಸಿ. ಇತರರಿದ್ದರು.

ದೇಶ ಕಂಡ ಪ್ರಾಮಾಣಿಕ ಪ್ರಧಾನಿ
ಬ್ಯಾಡಗಿ:
ಮಹಾತ್ಮ ಗಾಂಧಿಯವರ ಹೆಸರೇ ತತ್ತ್ವ, ಸಿದ್ಧಾಂತ, ನ್ಯಾಯ, ನಿಷ್ಠ್ಠುರ ಹಾಗೂ ಹೋರಾಟಗಳಿಗೆ ಖ್ಯಾತಿಯಾಗಿದ್ದು, ಅವರ ನಡೆ ನುಡಿ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಬಿಜೆಪಿ ಮುಖಂಡ ಮುರಿಗೆಪ್ಪ ಶೆಟ್ಟರ ಹೇಳಿದರು. ಪಟ್ಟಣದ ಸ್ವಾತಂತ್ರ್ಯ ಯೋಧರ ಭವನದಲ್ಲಿ ಶುಕ್ರವಾರ ಗಾಂಧೀಜಿಯವರ 151ನೇ ಜಯಂತ್ಯುತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಮಹಾತ್ಮರ ದಿನಾಚರಣೆಗಳನ್ನು ನೆಪ ಮಾತ್ರಕ್ಕೆ ಆಚರಿಸದೆ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ. ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಯವರು ದೇಶ ಕಂಡ ಅತ್ಯಂತ ಪ್ರಬುದ್ಧ ಹಾಗೂ ಪ್ರಾಮಾಣಿಕ ಪ್ರಧಾನಿ. ಅವರ ಜೈ ಜವಾನ್, ಜೈ ಕಿಸಾನ್ ಘೊಷಣೆ ಜಗಜ್ಜಾಹೀರಾಗಿದೆ. ಶಾಸ್ತ್ರಿಯವರಂಥ ರಾಜಕಾರಣಿಗಳ ಕೊರತೆ ದೇಶದಲ್ಲಿ ಈಗ ಎದ್ದು ಕಾಣುತ್ತಿದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಡಿವೆಪ್ಪ ಕುರಿ, ಅರಣ್ಯಾಧಿಕಾರಿ ಎಚ್. ಎಂ. ಮಹಾರಾಜಪೇಟಿ, ಎಚ್. ಎಂ. ಬಸವರಾಜಪ್ಪ, ನಾಗಪ್ಪ ಜೋಗಿಹಳ್ಳಿ, ಶಶಿಧರ ಗೊಲ್ಲರಹಳ್ಳಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net