ಮಹನೀಯರ ಜೀವನ ಚರಿತ್ರೆ ಓದಿ ತಿಳಿಯಿರಿ

ಚನ್ನರಾಯಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಾಡೆನಹಳ್ಳಿ ಲೋಕೇಶ್ ಉದ್ಘಾಟಿಸಿದರು.ಜಾವಗಲ್ ಪ್ರಸನ್ನ, ಹೆತ್ತೂರು ನಾಗರಾಜ್, ನೇತ್ರಾವತಿ, ದೇವರಾಜೇಗೌಡ, ವೈ.ಎಸ್.ವೀರ್ಭದ್ರಪ್ಪ, ಸುರೇಶ್ ಗುರೂಜಿ, ಜಬಿವುಲ್ಲಾ ಬೇಗ್ ಇತರರು ಇದ್ದರು.
ಫೋಟೋ ಶೀರ್ಷಿಕೆ 11ಸಿಆರ್_ಪಿ-1ಎ
Published on

ಚನ್ನರಾಯಪಟ್ಟಣ: ದೇಶ ಪ್ರೇಮ, ದೇಶ ಭಕ್ತಿ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ. ದೇಶಕ್ಕಾಗಿ ಹೋರಾಡಿದ ಮಹನೀಯರ ಜೀವನ ಚರಿತ್ರೆ ಓದಿ ಅವರ ತ್ಯಾಗ, ಬಲಿದಾನ ತಿಳಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್‌ಗೌಡ ಸಲಹೆ ನೀಡಿದರು.


ಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ಪೇಟೆ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 76ನೇ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ದೇಶಪ್ರೇಮ ಎಂಬುದು ಕಣ್ಣಿಗೆ ಕಾಣುವುದಲ್ಲ, ಅದು ಭಾವನಾತ್ಮಕ ವಿಷಯ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ಜತೆಗೆ ನಾಡು, ನೆಲ, ಜಲದ ಬಗ್ಗೆ ಗೌರವ ಮೂಡಿಸುವುದು ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಹೊಸ ಪೀಳಿಗೆಯಾದ ಇಂದಿನ ಯುವಕರಲ್ಲಿ ದೇಶಪ್ರೇಮ ಬಡಿದೆಬ್ಬಿಸುವ ಅವಶ್ಯಕತೆ ಇದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ, ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರಷ್ಟೆ ಸಾಲದು, ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ದೇಶಭಕ್ತಿ ಹಾಗೂ ಸಂಸ್ಕಾರ ಕಲಿಸಬೇಕು. ದೇಶಕ್ಕಾಗಿ ಪ್ರತಿಯೊಬ್ಬರು ತ್ಯಾಗದ ಮನೋಭಾವ ಹೊಂದಬೇಕು. ನಾವುಗಳ ನಮ್ಮ ಮಕ್ಕಳಿಗೆ ಏನನ್ನು ಕಲಿಸಬೇಕು ಎನ್ನವುದು ಮೊದಲು ನಮಗೆ ಅರಿವು ಇರಬೇಕು. ಮಕ್ಕಳಿಗೆ ಬರಿ ಶಿಕ್ಷಣ ನೀಡುವುದು ಕರ್ತವ್ಯ ಎಂದು ಭಾವಿಸದೆ, ಮಕ್ಕಳಿಗೆ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು ದೇಶದ ಸಮಗ್ರತೆ, ಐಕ್ಯತೆ, ಸಂವಿಧಾನದ ಬಗ್ಗೆ ಶಾಲಾ ಹಂತದಲ್ಲಿ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ ಎಂದರು.


ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗಸೂಚಿ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಜಾವಗಲ್ ಪ್ರಸನ್ನಕುಮಾರ್, ಹೆತ್ತೂರು ನಾಗರಾಜ್, ಮುಳ್ಕೆರೆ ಪ್ರಕಾಶ್, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಯುವರಾಜ್ ಮತ್ತು ನೂತನವಾಗಿ ತಾಲೂಕಿಗೆ ಆಗಮಿಸಿರುವ ತಹಸೀಲ್ದಾರ್ ಸಿ.ಜಿ. ಗೀತಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ವರಿಷ್ಠ ಡಾ.ವೈ.ಎಸ್. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ, ಸುರೇಶ್ ಗುರೂಜಿ, ಪ್ರಿಯಾಂಕಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ನೇತ್ರಾವತಿ, ಸಹ ಶಿಕ್ಷಕರ ಸಂಘದ ರಾಜ್ಯ ಘಟಕ ಅಧ್ಯಕ್ಷ ದೇವರಾಜೇಗೌಡ, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಪರಿಸರ ಪ್ರೇಮಿ ಚ.ನಾ.ಅಶೋಕ್, ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net