

ಮೈಸೂರು: ನಗರದ ನಾಟ್ಯ ಸಂಸ್ಥೆ ಮತ್ತು ಬಿ.ಎಂ.ಹ್ಯಾಬಿಟ್ಯಾಟ್ ಮಾಲ್‌ನಿಂದ ಮಂಗಳವಾರ 77ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಾಗವಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ರಂಗ ಕಲಾವಿದ ಹುಯಿಲಾಳು ರಾಮಸ್ವಾಮಿ ಮಾತನಾಡಿ, ಅನೇಕರ ತ್ಯಾಗ ಬಲಿದಾನದ ಮೂಲಕ ನಮಗೆ ಸ್ವಾತಂತ್ರೃ ಬಂದಿದ್ದು, ಸಮಾಜದಲ್ಲಿ ಸಮಾನತೆ ಕಾಣಬೇಕಿದೆ. ಗಾಂಧಿ, ಸುಭಾಷ್ ಚಂದ್ರಬೋಸ್, ಸರ್ದಾರ್ ವಲ್ಲಭಬಾಯಿ ಪಟೇಲ್ ಸೇರಿದಂತೆ ಅನೇಕ ಮಹಾನೀಯರು ಕಂಡ ಕನಸು ನನಸು ಮಾಡಬೇಕು ಎಂದರು.
ಗಾಯಕಿ ಲಕ್ಷ್ಮೀರಾಮ್, ರಂಗಕಲಾವಿದ ಎಸ್.ಶಿಶಿರಂಜನ್, ವಿದುಷಿ ಸಿ.ಮಹೇಶ್ವರಿ, ನಾಟ್ಯ ಸಂಸ್ಥೆ ಅಧ್ಯಕ್ಷ ಎನ್.ಪವಿತ್ರಾ, ಸಂತೋಷ್ ಇತರರು ಇದ್ದರು.