ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ

11arsph1ep
Published on

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಸಂಜೆ ಸಂಪನ್ನಗೊಂಡಿತು.

ಧಾರ್ಮಿಕ ಸಮಾರಂಭದಲ್ಲಿ ಸಿಗುಣಿಸಿ ವಿರಕ್ತಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಹಸಿದವರಿಗೆ ಅನ್ನ, ಅಜ್ಞಾನಿಗಳಿಗೆ ಅರಿವು, ಬಡ ಮಕ್ಕಳಿಗೆ ಶಿಕ್ಷಣ ನೀಡುವ ದಿಸೆಯಲ್ಲಿ ದಶಕಗಳ ಕಾಲದಿಂದಲೂ ಶ್ರೀಮಠ ನಿರಂತರವಾಗಿ ತೊಡಗಿಸಿಕೊಂಡಿದೆ. ಮಠಕ್ಕೆ ಭಕ್ತರೇ ಆಸ್ತಿ. ಭಕ್ತರಿಗೆ ಮಠವೇ ಆಸ್ತಿ. ಗುರು ಹಾಗೂ ಶಿಷ್ಯರ ನಡುವಿನ ಸಂಬಂಧ ಗೌರವ ಹಾಗೂ ಪ್ರೀತಿಯ ಸಂಕೋಲೆ ಇದ್ದಂತೆೆ. ಹರ ಮುನಿದರು ಗುರು ಕಾಯುವನು ಎಂಬ ಅಗಾಧ ನಂಬಿಕೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಶಿಷ್ಯರಲ್ಲಿ ಭೇದವೆಣಿಸದೆ ತಪ್ಪನ್ನು ತಿದ್ದುವ ಒಳ್ಳೆಯ ಉದ್ದೇಶಕ್ಕೆ ಮಾರ್ಗದರ್ಶನ ನೀಡುವ ಗುರುವಿಗೆ ಮಾತ್ರ ಭಕ್ತ ತನ್ನ ಹೃದಯದಲ್ಲಿ ಭಗವಂತನ ಸ್ಥಾನವನ್ನು ನೀಡುತ್ತಾನೆ ಎಂದು ಹೇಳಿದರು.

ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಕೋಳಗುಂದ ಕೇದಿಗೆಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ, ತಿಪಟೂರಿನ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಶ್ರೀ ಕ್ಷೇತ್ರದ ಉತ್ತರಾಧಿಕಾರಿ ಚೇತನ್ ಮರಿದೇವರು, ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಇದ್ದರು. ಎಚ್.ಎಸ್.ನೀಲಕಂಠಯ್ಯ ಮತ್ತು ಶಿವಲಿಂಗಮೂರ್ತಿ ಅವರಿಂದ ಪುರಾಣ ಪ್ರವಚನ ಮೂರು ದಿನ ನಿರಂತರವಾಗಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net