ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಇಂದು

01dhmp2
ದೇವಸ್ಥಾನದ ರಾಜಗೋಪುರ.
Published on

ಧರ್ಮಾಪುರ: ಗದ್ದಿಗೆಯ ಶ್ರೀ ಗುರು ಕೆಂಡಗಣ್ಣೇಶ್ವರ ಸ್ವಾಮಿ ಹಾಗೂ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮಾ.3ರಂದು ನಡೆಯಲಿದೆ.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಾದಳ್ಳಿಯ ಉಕ್ಕಿನ ಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಸಮ್ಮುಖದಲ್ಲಿ ರಥೋತ್ಸವ ದಿನದಂದು ಬೆಳಗ್ಗೆ 5.50ಕ್ಕೆ ಶ್ರೀ ಸ್ವಾಮಿಗೆ ಮಹಾಭಿಷೇಕ, 7.30ಕ್ಕೆ ಕೊಂಡೋತ್ಸವ ನಡೆಯಲಿದೆ. 11.30ಕ್ಕೆ ಸ್ವಾಮಿಜೀಗಳು ಮತ್ತು ಗಣ್ಯರು ಕೆಂಡಗಣ್ಣೇಶ್ವರ, ಮಹದೇಶ್ವರ ಮಹಾರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮದ್ಯಾಹ್ನ 2 ಗಂಟೆಗೆ ಭಕ್ತಿಗೀತೆ ಕಾರ್ಯಕ್ರಮ ಹಾಗೂ ಸಂಜೆ 7 ಗಂಟೆಗೆ ಬೆಳ್ಳಿ ಪಲ್ಲಕಿ ಉತ್ಸವ ನಡೆಯಲಿದೆ. ಜಾತ್ರೆಗೆ ಬರುವ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಬೆಳಗೆ 7.30 ರಿಂದಲೇ ದಾಸೋಹ ಏರ್ಪಡಿಸಲಾಗಿದೆ.

ಸಾರಿಗೆ ವ್ಯವಸ್ಥೆ: ಹುಣಸೂರು ಪಟ್ಟಣದ ಬಸ್ ನಿಲ್ದಾಣ ಹಾಗೂ ಮೈಸೂರು ನಗರ ಹಾಗೂ ಗ್ರಾಮಾಂತರ ನಿಲ್ದಾಣದಿಂದ ಜಾತ್ರೆಗಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net