ಮಹದೇಶ್ವರ ಬೆಟ್ಟದಲ್ಲಿ ರಜತ ಸಂಭ್ರಮ

2e92e14e-4a9d-4f8b-a5dd-0a0b6a251acd
ಮಲ್ಮೆಹದೇಶ್ವರ ಬೆಟ್ಟದ ಶ್ರೀಮಲ್ೆ ಮಹದೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಮಾಜಿ ಶಾಸಕ ಜೆ.ಎಚ್ ಪಟೇಲ್ ಉದ್ಘಾಟಿಸಿದರು. ವಿದ್ವಾನ್ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಆರ್.ನರೇಂದ್ರ, ಎ.ಆರ್.ಕೃಷ್ಣಮೂರ್ತಿ, ಮತ್ತು ಇತರರು ಇದ್ದರು.
Published on

400ಕ್ಕೂ ಹೆಚ್ಚು ಜನರ ನೇತ್ರ ತಪಾಸಣೆವಿಜಯವಾಣಿಯಿಂದ ಸೇವಾ ಕಾರ್ಯ

ಹನೂರು: ಚಾಮರಾಜನಗರ ಜಿಲ್ಲೆಯಾಗಿ ರೂಪುಗೊಂಡು 25 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ನಂ.1 ಕನ್ನಡ ದೈನಿಕ ವಿಜಯವಾಣಿ ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಶ್ರೀಮಲೆ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.


ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ 400ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದರು, 42 ಜನರನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, 47 ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಯಿತು.


ಮಲೆ ಮಹದೇಶ್ವರ ಬೆಟ್ಟದಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ನೂತನ ಜಿಲ್ಲೆಯನ್ನು ಉದ್ಘಾಟನೆ ಮಾಡಿದ್ದರು. ಈ ಸವಿ ನೆನಪನ್ನು ನೆನೆಯುತ್ತಾ 25 ವರ್ಷದ ರಜತ ಸಂಭ್ರಮದಲ್ಲಿ ಇವರ ಪುತ್ರ, ಮಾಜಿ ಶಾಸಕ ಮಹಿಮಾ ಪಟೇಲ್ ಅವರು ಕುಟುಂಬ ಸಮೇತ ಆಗಮಿಸಿ, ಶಿಬಿರಕ್ಕೆ ಚಾಲನೆ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಯಿತು.


ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಲು ಶ್ರಮಿಸಿದ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರನ್ನು ಸ್ಮರಣೆ ಮಾಡುತ್ತಾ, ಮಾಜಿ ಸಚಿವ ರಾಜೂಗೌಡ ಅವರನ್ನು ನೆನೆಯುತ್ತಾ ಶಿಬಿರಕ್ಕೆ ಪ್ರೀತಿಯಿಂದ ಆಹ್ವಾನಿಸಿದ್ದ ಬಿ.ರಾಚಯ್ಯ ಅವರ ಪುತ್ರ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ರಾಜೂಗೌಡ ಪುತ್ರ ಶಾಸಕ ಆರ್.ನರೇಂದ್ರ, ಮಾಜಿ ಶಾಸಕ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜು ಅವರ ಉಪಸ್ಥಿತಿ ಗೌರವ ತಂದುಕೊಟ್ಟಿತು. ಮಲೆ ಮಹದೇಶ್ವರ ಬೆಟ್ಟದಂತಹ ಗುಡ್ಡಗಾಡು ಪ್ರದೇಶದ ಜನರ ಮೇಲೆ ವಿಶೇಷ ಪ್ರೀತಿ ಇಟ್ಟಿರುವ, ಮಾನವೀಯ ತತ್ವದ ಸಾಕಾರ ಮೂರ್ತಿ ಎಸಿಸಿಕೊಂಡಿರುವ ಸಾಲೂರು ಬೃಹನ್ಮಠದ ಪೀಠಾಧಿಪತಿ ವಿದ್ವಾನ್ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶಿಬಿರವನ್ನು ಯಶಸ್ಸಿನತ್ತ ಕೊಂಡೊಯ್ದ ಮೊದಲಿಗರು ಎಂಬ ಪ್ರಸಂಶೆಗೆ ಕಾರಣರಾದರು.


ತಮಿಳುನಾಡಿನ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ, ಶ್ರೀ ಸಾಲೂರು ಬೃಹನ್ಮಠ, ಜೇನುಗೂಡು ಸಮುದಾಯ ನಿರ್ವಹಣಾ ಸಂಸ್ಥೆ ಹಾಗೂ ಮ.ಬೆಟ್ಟ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.


ಶಿಬಿರಕ್ಕೆ ಮ.ಬೆಟ್ಟ ಸೇರಿದಂತೆ ಮಾದಪ್ಪನ ಬೆಟ್ಟದ ತಪ್ಪಲಿನ ಕಾಡಂಚಿನ ಗ್ರಾಮಗಳಾದ ಇಂಡಿಗನತ್ತ, ಪಡಸಲನತ್ತ, ಕೊಕ್ಕಬರೆ, ತುಳಿಸಿಕೆರೆ, ಪುದೂರು, ಪೊನ್ನಾಚಿ, ಕೊಂಬುಡಿಕ್ಕಿ, ರಾಮಾಪುರ ಸೇರಿದಂತೆ ಈ ಭಾಗದ 20ಕ್ಕೂ ಹೆಚ್ಚು ಗ್ರಾಮದಿಂದ ಆಗಮಿಸಿದ್ದ ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಬೆಳಗ್ಗೆ 9ರಿಂದ ಪ್ರಾರಂಭವಾದ ಶಿಬಿರವು ಸಂಜೆ 5ರ ವೆರೆಗೆ ನಡೆಯಿತು. ಕಣ್ಣಿನ ದೋಷವುಳ್ಳ 42 ಜನರನ್ನು ಶಸ್ತ್ರ ಚಿಕಿತ್ಸೆಗಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಣ್ಣಿನ ದೋಷವುಳ್ಳ 47 ಜನರಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.

ಮಲ್ಮೆಹದೇಶ್ವರ ಬೆಟ್ಟದ ಶ್ರೀಮಲ್ೆ ಮಹದೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ವಿವಿಧ ಗ್ರಾಮಸ್ಥರು ಭಾಗವಹಿಸಿದರು.
ಮಲ್ಮೆಹದೇಶ್ವರ ಬೆಟ್ಟದ ಶ್ರೀಮಲ್ೆ ಮಹದೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ವಿವಿಧ ಗ್ರಾಮಸ್ಥರು ಭಾಗವಹಿಸಿದರು.

ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಬೇಕು: ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ನನ್ನ ತಂದೆ ಜೆ.ಎಚ್. ಪಟೇಲ್ ಅವರ ಅಧಿಕಾರವಧಿಯಲ್ಲಿ ಚಾ.ನಗರ ಸೇರಿದಂತೆ 7 ಜಿಲ್ಲೆಗಳು ಹೊಸದಾಗಿ ರಚನೆಯಾದವು. ಈ ವೇಳೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಾ.ನಗರ ಇನ್ನು ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತನ್ನು ನೀಡಬೇಕು. ಜತೆಗೆ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಜನತೆ ಶ್ರಮಿಸಬೇಕು. ಈ ಹಿಂದೆ ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಸಮೃದ್ಧಿಯಿಂದ ಕೂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಕ್ಷೀಣಿಸುತ್ತಿದೆ. ಆದ್ದರಿಂದ ಅರಣ್ಯವನ್ನು ಸಂರಕ್ಷಿಸುವುದರ ಮೂಲಕ ನಿಸರ್ಗ ಸಂಪತ್ತನ್ನು ಸಮೃದ್ಧಿಗೊಳಿಸಬೇಕು. ಜತೆಗೆ ಸಂಸ್ಕೃತಿ, ಆರೋಗ್ಯ, ಸಾಮಾಜಿಕ, ಶಿಕ್ಷಣ ಹಾಗೂ ಇನ್ನು ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿ ಸಂಪದ್ಭರಿತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಿಳಿಸಿದರು.

ಶಾಸಕ ಆರ್.ನರೇಂದ್ರ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ವಾಟಾಳ್ ನಾಗರಾಜು, ಬಳೇಪೇಟೆ ಪ್ರಕಾಶ್, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ, ಜೇನುಗೂಡು ಸಮುದಾಯ ನಿರ್ವಹಣೆ ಸಂಸ್ಥೆಯ ಸಿಇಒ ಮಂಜುನಾಥ್, ಬೇಡಗಂಪಣ ಅರ್ಚಕ ಕೆ.ವಿ ಮಾದೇಶ್, ಮಾಜಿ ಸೈನಿಕ ಗಂಗಾಧರ್, ಪ್ರಾಧಿಕಾರದ ನೌಕರರು, ತೋಟಗಾರಿಕೆ ನೌಕರರು ಹಾಗೂ ಮಹದೇಶ್ವರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 42 ಜನರಿಗೆ ಶಸ್ತ್ರ ಚಿಕಿತ್ಸೆ: ಶಿಬಿರದಲ್ಲಿ ಭಾಗವಹಿಸಿದ್ದ 42 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ತಮಿಳುನಾಡಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಡಾ.ರಕ್ಷಿತಾ, ಡಾ.ಅನುಷಾ ಮತ್ತು 8 ಶುಶ್ರೂಷಕರ ತಂಡ ರೋಗಿಗಳ ಕಣ್ಣಿನ ತಪಾಸಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net