ಮಹದೇಶ್ವರ ಬೆಟ್ಟದಲ್ಲಿ ನಾಪತ್ತೆ

Shivanna Gowda
Published on

ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುಂಡ್ಲುಪೇಟೆ ಮೂಲದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಗುಂಡ್ಲುಪೇಟೆ ತಾಲೂಕಿನ ಸೋಮನಪುರ ಗ್ರಾಮದ ನಿವಾಸಿ ಶಿವಣ್ಣಗೌಡ (30) ಮಲೆ ಮಹದೇಶ್ವರ ಬೆಟ್ಟದಿಂದ ಕಾಣೆಯಾಗಿದ್ದಾರೆ. 5 ಅಡಿ ಎತ್ತರ, ಗೋಧಿ ಮೈ ಬಣ್ಣ, ಕೋಲು ಮುಖ, ತೆಳ್ಳನೆಯ ಶರೀರ ಹೊಂದಿದ್ದು, ಎಡಗೈನ ತೋರು ಬೆರಳಿನಲ್ಲಿ ಹಳೆ ಗಾಯದ ಗುರುತು ಇರುತ್ತದೆ. ಸುಳಿವು ದೊರೆತಲ್ಲಿ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ದೂ.ಸಂ 08225-272141 ಮತ್ತು ಮೊ.ಸಂ 9480804658, ಕಂಟ್ರೋಲ್ ರೂಂ ದೂ.ಸಂ 08226-222398 ಸಂಪರ್ಕಿಸುವಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net