ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ

12 HANUR 3 A
ನಂಜನಗೂಡು ತಾಲೂಕಿನ ಏಚಗುಂಡ್ಲು ಗ್ರಾಮಸ್ಥರು ಬುಧವಾರ ಹನೂರು ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ತೆರಳಿದರು.
Published on

ಹನೂರು: ನಂಜನಗೂಡು ತಾಲೂಕಿನ ಏಚಗುಂಡ್ಲು ಗ್ರಾಮದ ನೂರಾರು ಭಕ್ತರು ಬುಧವಾರ ಹನೂರು ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ತೆರಳಿದರು.

ಬೆಳಗ್ಗೆ 6 ಗಂಟೆಯಲ್ಲಿ ಸಿಂಗನಲ್ಲೂರು, ಕಾಮಗೆರೆ ಹಾಗೂ ಮಂಗಲ ಗ್ರಾಮಗಳಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಆದರೂ ಮಳೆ ನಡುವೆಯೂ ಭಕ್ತರು ತಂಡೋಪತಂಡವಾಗಿ ಪಾದಯಾತ್ರೆ ಮುಂದುವರಿಸಿದರು. ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರು. ಈ ವೇಳೆ ಅಪ್ಪು ಅಭಿಮಾನಿ ಬಾಲಕಿಯೊಬ್ಬಳು ಪುನೀತ್ ರಾಜ್‌ಕುಮಾರ್ ಭಾವಚಿತ್ರ ಹಿಡಿದು ಸಾಗುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.

ಪಾದಯಾತ್ರೆ ನಡೆಸುತ್ತಿದ್ದ ಏಚಗುಂಡ್ಲು ಗ್ರಾಮದ ಶಂಕರ್‌ನಾಯ್ಕ ಮಾತನಾಡಿ, ಕಳೆದ 8 ವರ್ಷದಿಂದಲೂ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ದೀಪಾವಳಿ ಜಾತ್ರಾ ಮಹೋತ್ಸವಕ್ಕೂ ಮುನ್ನ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದು, ಅಲ್ಲಿಯೇ ಒಂದು ವಾರ ಕಾಲ ವಾಸ್ತವ್ಯ ಹೂಡಲಿದ್ದೇವೆ. ಈ ವೇಳೆ ಪರ ಮಾಡಿ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಅಲ್ಲದೇ ದೇವಸ್ಥಾನದ ವಿವಿಧ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿ ನಮ್ಮ ಹರಕೆ ಸಲ್ಲಿಸುವ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾಗುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net