ಮಸ್ಲಿಮ್​ಗೆ ಮೀಸಲಾತಿ ಕೊಟ್ಟರೆ ತಪ್ಪೇನಿಲ್ಲ

shivanand patil
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸರ್ಕಾರದ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮ್​ಗೆ ಮೀಸಲಾತಿ ಕಲ್ಪಿಸಿದರೆ ತಪ್ಪೇನಿಲ್ಲ ಎಂದು ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಕೇಳುವುದು ಎಲ್ಲರ ಹಕ್ಕು. ಎಲ್ಲ ಸಮುದಾಯಕ್ಕೂ ಮೀಸಲಾತಿ ಕೇಳುವ ಹಕ್ಕು ಇದೆ. ಆರ್ಥಿಕವಾಗಿ ಹಿಂದುಳಿರುವ ಸಮುದಾಯಕ್ಕೆ ಮೀಸಲಾತಿ ನೀಡಿದರೆ ತಪ್ಪೇನಿಲ್ಲ ಎಂದರು.

ಹಿಂದೂಗಳಲ್ಲಿಯೂ ಸಹ ಬಡವರ ಇದ್ದಾರೆ. ಲಿಂಗಾಯತರು ಸಹ ಮೀಸಲಾತಿ ಕೇಳುತ್ತಿದ್ದಾರೆ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಒಟ್ಟಾರೆ ದೇಶದಲ್ಲಿ ಬಡವರ ಸಂಖ್ಯೆ ಜಾಸ್ತಿಯಿದೆ. ಗೊಲ್ಲ ಸಮುದಾಯ ಎಸ್​ಸಿ ನೂ ಅಲ್ಲ, ಎಸ್ಟಿ ನೂ ಅಲ್ಲ. ಅಂತಹ ಸಮುದಾಯವನ್ನು ನೋಡಬೇಕು. ರಾಜಕೀಯವಾಗಿ ಹಿಂದೂ- ಮುಸ್ಲಿಂ ಅಂತ ಮಾತನಾಡುತ್ತ ನಾವು- ಅವರು ವೈರಿಗಳು ಎಂದಾಗಬಾರದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net