

ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಏ. 26ರಂದು ಮತದಾನ ನಡೆಯಲಿದೆ. ಈ ಸಂಬಂಧ ಏ. 25ರಂದು ಮಸ್ಟರಿಂಗ್ ಕಾರ್ಯಕ್ಕೆ ವಿವಿಧ ತಾಲೂಕುಗಳಿಗೆ ಮತಗಟ್ಟೆ ಸಿಬ್ಬಂದಿ ತೆರಳಲು, 26ರಂದು ಡಿ-ಮಸ್ಟರಿಂಗ್ ಪೂರ್ಣಗೊಂಡ ನಂತರ ಹಿಂದಿರುಗಲು ಕೆಎಸ್‌ಆರ್‌ಟಿಸಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಚುನಾವಣಾ ಕಾರ್ಯಕ್ಕಾಗಿ ಒಟ್ಟು 299 ವಾಹನ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ವಾಹನ ತೆರಳುವ ಮಾರ್ಗದ ಕುರಿತು ನಾಮಫಲಕ ಹಾಕಬೇಕು. ಈ ಕಾರ್ಯದಲ್ಲಿ ಯಾವುದೇ ರೀತಿ ವ್ಯತ್ಯಾಸವಾಗದಂತೆ ಉಸ್ತುವಾರಿ ನೋಡಿಕೊಳ್ಳಬೇಕು. ತಾಲೂಕು ಕಚೇರಿಯ ವಾಹನ ನಿರ್ವಹಣೆಗೂ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕುವಾರು ನೌಕರರ ವಿವರ: ಮೊಳಕಾಲ್ಮ್ಮೂರು ತಾಲೂಕು ವಾಹನ ನಿರ್ವಹಣೆ ಶಾಖೆಯ ಮೇಲ್ವಿಚಾರಣೆಗೆ ನೌಕರರಾದ ಕೆಂಚಲಿಂಗಪ್ಪ-9880691998, ಶಿವರಾಜ್-9108836293, ಚಳ್ಳಕೆರೆ-ಶ್ರೀನಿವಾಸ್-9448566953, ಪ್ರಸನ್ನ-9844401294, ಚಿತ್ರದುರ್ಗ-ಎಸ್.ಕೆ.ಮಂಜುನಾಥ್-9844412448, ಹಿರಿಯೂರು-ಮಾರುತಿ-6360157344, ಹೊಸದುರ್ಗ- ಕರಿಯಪ್ಪ-9900894779, ಹೊಳಲ್ಕೆರೆ-ಆನಂದ-9632414253ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ತಾಲೂಕು ಕಚೇರಿ ಸಿಬ್ಬಂದಿಗೆ ವಿಭಾಗೀಯ ಸಂಚಲನಾಧಿಕಾರಿ, ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ಕಚೇರಿ, ವಿಭಾಗೀಯ ಸಂಚಲನಾಧಿಕಾರಿ ಜಿ.ಸುರೇಶ್ ಮೊಬೈಲ್ ಸಂಖ್ಯೆ 9606908962ಗೆ ಸಂಪರ್ಕಿಸಬಹುದು. ಈ ನಂಬರ್‌ಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಚುನಾವಣಾ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದ್ದಾರೆ.
299 ವಾಹನಗಳನ್ನು ತಾಲೂಕಿನಲ್ಲಿ ಮರು ಹಂಚಿಕೆ ಮಾಡಿ, ಸ್ಥಳಗಳಿಗೆ ನಿಗದಿ ಪಡಿಸಿರುವ ವಾಹನಗಳ ಬಳಿ ಬಂದು ತಪ್ಪದೇ ಏ. 25ರಂದು ಬೆಳಗ್ಗೆ 6ಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದ್ದಾರೆ.
ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕಾರ್ಯ ನಡೆಯುವ ಮೊಳಕಾಲ್ಮೂರು ಸರ್ಕಾರಿ ಪಿಯು ಕಾಲೇಜು, ಚಳ್ಳಕೆರೆಯ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗದ ಮುರುಘಾರಾಜೇಂದ್ರ ಕ್ರೀಡಾಂಗಣದ ಸರ್ಕಾರಿ ಕಲಾ ಕಾಲೇಜು, ಹಿರಿಯೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು, ಗುರುಭವನ ಪಕ್ಕದ ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಹೊಸದುರ್ಗ ತಾಯಮ್ಮ ಎಡೆತೊರೆ ಸದ್ದಿವಾಲ್ ಲಿಂಗಯ್ಯ ಪದವಿ ಪೂರ್ವ ಕಾಲೇಜು, ಹೊಳಲ್ಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಹನಗಳು ಸಿದ್ಧವಾಗಿ ನಿಂತಿರಲಿವೆ ಎಂದು ತಿಳಿಸಿದ್ದಾರೆ.