ಮಸ್ಕಲ್ ಸೇತುವೆ ನಡುವೆ ಅಪಾಯ ಸೃಷ್ಟಿಸಿದ ಗುಂಡಿ

maskal
Published on

ಔರಾದ್: ತಾಲೂಕಿನ ಮಸ್ಕಲ್ ಗ್ರಾಮ ಹತ್ತಿರದ ಹಳೇ ಸೇತುವೆ ಮೇಲೆ ಬೃಹತ್ ಗುಂಡಿಯೊಂದು ಬಿದ್ದಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ.

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸೇತುವೆ ಮೇಲಿಂದ ಬೃಹತ್ ಪ್ರಮಾಣದಲ್ಲಿ ನೀರು ಹರಿದಿದೆ. ನೀರಿನ ರಭಸಕ್ಕೆ ಸೇತುವೆ ನಡುವೆ ದೊಡ್ಡದಾದ ಗುಂಡಿ ಬಿದ್ದಿರುವುದು ವಾಹನ ಸವಾರರಿಗೆ ಅಪಾಯ ಸೃಷ್ಟಿಸಿದೆ. ಯಾವಾಗ ಅವಘಡ ಸಂಭವಿಸುತ್ತದೆಯೋ ಎಂಬ ಆತಂಕ ಮೂಡಿದೆ.

ಸಂತಪುರದಿಂದ ಸಂಗಮ್ ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸೇತುವೆ ಕೆಲಸ ಪ್ರಗತಿಯಲ್ಲಿರುವ ಕಾರಣಕ್ಕೆ ಭಾಲ್ಕಿ-ಉದಗೀರ-ಸಂಗಮ್- ಠಾಣಾಕುಶನೂರ ಮೂಲಕ ನೂರಾರು ವಾಹನಗಳು ಮಸ್ಕಲ್ ಮೂಲಕ ಓಡಾಡುತ್ತವೆ. ವೇಗವಾಗಿ ಬರುವ ವಾಹನಗಳಿಗೆ ಹಾಗೂ ರಾತ್ರಿ ವೇಳೆ ಈ ದೊಡ್ಡದಾದ ಗುಂಡಿ ಕಣ್ಣಿಗೆ ಕಾಣಿಸದಂಗಿದೆ. ಇಲ್ಲಿ ದುರಂತ ಸಂಭವಿಸುವ ಮೊದಲೇ ಸಂಬಂಧಿತರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ರಮೇಶ ಹೆಡಗಾಪುರೆ, ಸಿದ್ದರಾಮ ಪಾಟೀಲ್, ಲೋಕೇಶ್, ಇಸ್ಮಾಯಿಲ್, ವೀರಶೆಟ್ಟಿ, ಅನೀಲ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net